* ಹಂಪಿ ಕನ್ನಡ ವಿಶ್ವವಿದ್ಯಾಲಯದ 32ನೇ ಘಟಿಕೋತ್ಸವ ಜನವರಿ 10ರಂದು ನಡೆಯಲಿದೆ. ಸಮಾಜದಲ್ಲಿ ಸಾಧನೆಗೈದ ಮೂವರಿಗೆ ನಾಡೋಜ ಗೌರವ ಪದವಿಗೆ ಆಯ್ಕೆ ಮಾಡಲಾಗಿದೆ ಎಂದು ವಿವಿ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಅವರು ತಿಳಿಸಿದ್ದಾರೆ.
* ಹಂಪಿ ಕನ್ನಡ ವಿಶ್ವವಿದ್ಯಾಲಯ ಕೊಡಮಾಡುವ ಪ್ರತಿಷ್ಠಿತ “ನಾಡೋಜ ಗೌರವ ಪದವಿ” ಗೆ ಈ ಬಾರಿ ಬೀದರ್‌ನ ಭಾಲ್ಕಿ ಹಿರೇಮಠದ ಡಾ.ಬಸವಲಿಂಗ ಪಟ್ಟದೇವರು ಸ್ವಾಮೀಜಿ (ಸಮಾಜ ಸೇವೆ), ಆಂಧ್ರ ಪ್ರದೇಶದ ಬುಡಕಟ್ಟು ವಿವಿ ಕುಲಪತಿ ಡಾ.ತೇಜಸ್ವಿ ಕಟ್ಟಿಮನಿ (ಶಿಕ್ಷಣ ಕ್ಷೇತ್ರ) ಹಾಗೂ ತುಮಕೂರು ವಿವಿ ವಿಶ್ರಾಂತ ಕುಲಪತಿ ಡಾ.ಎಸ್.ಸಿ.ಶರ್ಮಾ (ವಿಜ್ಞಾನ ಕ್ಷೇತ್ರ) ಅವರು ಆಯ್ಕೆಯಾಗಿದ್ದಾರೆ ಎಂದು ವಿವಿಯ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಅವರು ತಿಳಿಸಿದ್ದಾರೆ.
* ತೇಜಸ್ವಿ ಕಟ್ಟಿಮನಿ (ಧಾರವಾಡ) ಹಾಗೂ, ಶಿಕ್ಷಣ ಕ್ಷೇತ್ರದಲ್ಲಿ ಹಾಗೂ ನ್ಯಾನೊ ಕ್ಷೇತ್ರದಲ್ಲಿ ಸಾಧನೆ ಮಾಡಿದ 'ನ್ಯಾಕ್' ನಿವೃತ್ತ ನಿರ್ದೇಶಕ ಪ್ರೊ. ಎಸ್. ಸಿ. ಶರ್ಮಾ (ಬೆಂಗಳೂರು) ಅವರು ನಾಡೋಜ ಗೌರವಕ್ಕೆ ಭಾಜನರಾಗಿದ್ದಾರೆ ಎಂದು ಕುಲಪತಿ ಮಾಹಿತಿ ನೀಡಿದರು.
* 32ನೇ ನುಡಿಹಬ್ಬದ ಘಟಿಕೋತ್ಸವದ ನಿಮಿತ್ತ ಕುಲಪತಿ “ನಾಡೋಜ ಗೌರವಕ್ಕೆ ಬೀದರ್ ಜಿಲ್ಲೆಯ ಬಾಲ್ಕಿ ಹೀರೆಮಠದ ಡಾ.ಬಸವಲಿಂಗ ಪಟ್ಟದೇವರು ಅವರು ಸಮಾಜ ಸೇವೆಯಲ್ಲಿ ಕನ್ನಡ ಸ್ವಾಮಿ ಎಂದು ಪ್ರಖ್ಯಾತಿಯಾಗಿದ್ದಾರೆ.
* ಕನ್ನಡ ವಿವಿಯ ನವರಂಗ ಬಯಲು ಮಂದಿರದಲ್ಲಿ ಜನವರಿ 10 ರಂದು ನಡೆಯಲಿರುವ 32ನೇ ನುಡಿಹಬ್ಬ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ನಾಡೋಜ ಪದವಿ ಪ್ರದಾನ ಮಾಡಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್ ಡಿ.ಲಿಟ್ ಹಾಗೂ 264 ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪಿಎಚ್‌ಡಿ ಪದವಿಯನ್ನು ಪ್ರದಾನ ಮಾಡಲಿದ್ದಾರೆ.
ಶನಿವಾರ, 06 ಜನವರಿ 2024
10:20 ಪೂರ್ವಾಹ್ನ
Daily PDF
ಹಂಪಿ ಕನ್ನಡ ವಿಶ್ವವಿದ್ಯಾಲಯ : ಮೂವರಿಗೆ ನಾಡೋಜ ಗೌರವ ಪದವಿ
Authored by:
Bhagya R K