* ಹಣದುಬ್ಬರ ಪ್ರಮಾಣವು ಜುಲೈನಿಂದ ಆಗಸ್ಟ್ ವರೆಗಿನ ಅವಧಿಯಲ್ಲಿ ಶೇಕಡಾ 3.65ಕ್ಕೆ ಕುಸಿತ ಕಂಡಿದ್ದು, ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಗದಿ ಮಾಡಿಕೊಂಡಿರುವ ಮಿತಿಯಲ್ಲಿ ಇದ್ದ ಚಿಲ್ಲರೆ ಹಣದುಬ್ಬರ ಪ್ರಮಾಣವು ಸೆಪ್ಟೆಂಬರ್ ತಿಂಗಳಲ್ಲಿ ಶೇಕಡ 5.49ಕ್ಕೆ ಏರಿಕೆ ಕಂಡಿದೆ.
* ತರಕಾರಿ ಮತ್ತು ಅಗತ್ಯ ವಸ್ತುಗಳ ಬೆಲೆ ನಿರಂತರ ಏರಿಕೆಯಿಂದಾಗಿ ಚಿಲ್ಲರೆ ಹಣದುಬ್ಬರ ಏರಿಕೆಯಾಗಿದ್ದು, 9 ತಿಂಗಳಲ್ಲಿಯೇ ಗರಿಷ್ಠ ಪ್ರಮಾಣದ್ದಾಗಿದೆ.
* ಆಹಾರ ವಸ್ತುಗಳ ಬೆಲೆಯಲ್ಲಿ ಆಗಿರುವ ತೀವ್ರ ಹೆಚ್ಚಳವು ಹಣದುಬ್ಬರ ಪ್ರಮಾಣವು ಏರಿಕೆ ಕಂಡಿರುವುದಕ್ಕೆ ಪ್ರಮುಖ ಕಾರಣ ಎಂಬುದನ್ನು ಕೇಂದ್ರ ಸರ್ಕಾರ ಸೋಮವಾರ( ಅ.14) ಬಿಡುಗಡೆ ಮಾಡಿರುವ ಅಂಕಿ-ಅಂಶಗಳು ತಿಳಿಸಿವೆ.
* ಚಿಲ್ಲರೆ ಹಣದುಬ್ಬರ ಪ್ರಮಾಣವು ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಶೇ 5.02ರಷ್ಟು ಇತ್ತು. ಆಗಸ್ಟ್‌ನಲ್ಲಿ ಶೇ 5.66ರಷ್ಟು ಇದ್ದ ಆಹಾರ ವಸ್ತುಗಳ ಹಣದುಬ್ಬರ ಪ್ರಮಾಣವು ಸೆಪ್ಟೆಂಬರ್ ನಲ್ಲಿ ಶೇ 9.24ಕ್ಕೆ ಏರಿಕೆ ಕಂಡಿದೆ. ಕಳೆದ ವರ್ಷದ ಸೆಪ್ಟೆಂಬರ್ ತಿಂಗಳ ಮಟ್ಟಕ್ಕೆ ಹೋಲಿಸಿದರೆ, ಈ ವರ್ಷದ ಸೆಪ್ಟೆಂಬರ್‌ನಲ್ಲಿ ತರಕಾರಿಗಳ ಬೆಲೆಯು ಶೇ 36ರಷ್ಟು ಹೆಚ್ಚಳ ಆಗಿದೆ.
* ಹಣ್ಣುಗಳ ಬೆಲೆ ಶೇ 7.65ರಷ್ಟು, ದ್ವಿದಳ ಧಾನ್ಯಗಳ ಬೆಲೆಯು ಶೇ 9.81ರಷ್ಟು ಹಾಗೂ ಏಕದಳ ಧಾನ್ಯಗಳ ಬೆಲೆಯು ಶೇ 6.84ರಷ್ಟು ಏರಿಕೆ ಕಂಡಿದೆ.
* ಹವಾಮಾನ ಪರಿಸ್ಥಿತಿ ಸಹ ಹಣದುಬ್ಬರ ಏರಿಕೆಗೆ ಕಾರಣವಾಗಿರುವ ಸಾಧ್ಯತೆ ಇದೆ ಎಂದು ಕೇಂದ್ರ ಸಾಂಖ್ಯಿಕ ಯೋಜನಾ ಅನುಷ್ಠಾನ ಸಚಿವಾಲಯವು ಹೇಳಿದೆ.
* ಹಣದುಬ್ಬರ ಪ್ರಮಾಣವು ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚು ತೀವ್ರವಾಗಿದೆ. ಸೆಪ್ಟೆಂಬರ್ಪ್ರ ತಿಂಗಳಲ್ಲಿ ಗ್ರಾಮಾಂತರ ದೇಶಗಳಲ್ಲಿನ ಹಣದುಬ್ಬರ ಪ್ರಮಾಣ 5.87ರಷ್ಟು, ನಗರ ಪ್ರದೇಶಗಳಲ್ಲಿನ ಹಣದುಬ್ಬರ ಶೇ. 5.05ರಷ್ಟು ಇತ್ತು. ಈ ಹಿಂದೆ ಕ್ರಮವಾಗಿ ಶೇ. 4.16 ಹಾಗೂ ಶೇ. 3.14ರಷ್ಟು ಇತ್ತು.
ಮಂಗಳವಾರ, 15 ಅಕ್ಟೋಬರ್ 2024
3:18 ಅಪರಾಹ್ನ
Daily PDF
ಹಣದುಬ್ಬರ ಪ್ರಮಾಣ ಶೇ 5.49ಕ್ಕೆ ಹೆಚ್ಚಳ
Authored by:
Jyoti Angadi