➤ ಭಾರತದ ಪ್ರಮುಖ ಖಾಸಗಿ ಜೀವ ವಿಮಾ ಸಂಸ್ಥೆಯಾದ HDFC ಲೈಫ್ (HDFC Life), ವಿಭಾ ಪಡಲ್ಕರ್ ಅವರನ್ನು ಮುಂದಿನ 5 ವರ್ಷಗಳ ಅವಧಿಗೆ ವ್ಯವಸ್ಥಾಪಕ ನಿರ್ದೇಶಕಿ (MD) ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (CEO) ಪುನರ್ ನೇಮಕ ಮಾಡಲು ಅನುಮೋದನೆ ನೀಡಿದೆ. ಏಪ್ರಿಲ್ 21 ರಂದು ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ಈ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಅನುಮೋದನೆ: ಈ ನೇಮಕಾತಿಯು ಶೇರುದಾರರ ಮತ್ತು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI) ಅನುಮೋದನೆಗೆ ಒಳಪಟ್ಟಿರುತ್ತದೆ.
➤ ವಿಭಾ ಪಡಲ್ಕರ್ ಅವರು 2008 ರಲ್ಲಿ HDFC ಲೈಫ್ ಸೇರಿದ್ದರು ಮತ್ತು 2018 ರಿಂದ MD ಮತ್ತು CEO ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ನೇತೃತ್ವದಲ್ಲಿ ಸಂಸ್ಥೆಯು ವಿಮಾ ಕ್ಷೇತ್ರದಲ್ಲಿ ಗಣನೀಯ ಬೆಳವಣಿಗೆ ಕಂಡಿದೆ.
➤ IRDAI ನಿಯಮ ಮತ್ತು ಸ್ಪಷ್ಟನೆ: ಇತ್ತೀಚಿನ ವರದಿಗಳ ಪ್ರಕಾರ, ವಿಮಾ ಕಂಪನಿಗಳ ಮುಖ್ಯಸ್ಥರ ಅವಧಿಯನ್ನು 15 ವರ್ಷಗಳಿಗೆ ಸೀಮಿತಗೊಳಿಸುವ IRDAI ನಿಯಮದ ಕುರಿತು ಕೆಲವು ಚರ್ಚೆಗಳು ನಡೆಯುತ್ತಿವೆ. ಆದರೆ, HDFC ಲೈಫ್ ಮಂಡಳಿಯು ಅವರ ಯಶಸ್ವಿ ನಾಯಕತ್ವವನ್ನು ಪರಿಗಣಿಸಿ ಈ ಪುನರಾಯ್ಕೆ ಮಾಡಿದೆ.
➤ 2000ರಲ್ಲಿ ಸ್ಥಾಪನೆಯಾದ ಮುಂಬೈನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ HDFC ಲೈಫ್, HDFC ಬ್ಯಾಂಕ್ ಮತ್ತು ಅಬರ್ಡನ್ (Abrdn) ನಡುವಿನ ಜಂಟಿ ಉದ್ಯಮವಾಗಿದ್ದು, ಪ್ರಸ್ತುತ ಭಾರತೀಯ ಷೇರು ಮಾರುಕಟ್ಟೆಯಲ್ಲಿ ನೋಂದಾಯಿತವಾಗಿರುವ ದೇಶದ ಅತಿದೊಡ್ಡ ಖಾಸಗಿ ಜೀವ ವಿಮಾ ಕಂಪನಿಗಳಲ್ಲಿ ಒಂದಾಗಿದೆ.
ಗುರುವಾರ, 23 ಎಪ್ರಿಲ್ 2026
10:30 ಪೂರ್ವಾಹ್ನ
Daily PDF
ಎಚ್ಡಿಎಫ್ಸಿ ಲೈಫ್ ಎಂಡಿ ಮತ್ತು ಸಿಇಒ ಆಗಿ ವಿಭಾ ಪಡಲ್ಕರ್ ಪುನರಾಯ್ಕೆ
Authored by:
Akshata Halli