* ದೇಶದಲ್ಲಿ ಹಾವು ಕಡಿತ ಪ್ರಕರಣ (Snake bite) ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು (The Ministry of Health and Family Welfare) ಹಾವು ಕಡಿತವನ್ನು ಕಾಯಿಲೆ ಎಂದು ಘೋಷಣೆ ಮಾಡಿದೆ.
* ಹಾವು ಕಡಿತದಿಂದ ಪ್ರತಿವರ್ಷ ದೇಶದಲ್ಲಿ 50000 ಕ್ಕೂ ಹೆಚ್ಚು ಜನರು ಬಲಿಯಾಗುತ್ತಿದ್ದು, ಇದನ್ನು ತಡೆಯಲು ಕೇಂದ್ರ ಸರ್ಕಾರ ಈ ಮಹತ್ವದ ಘೋಷಣೆ ಮಾಡಿದೆ.
* 2030ರ ವೇಳೆಗೆ ಭಾರತದಲ್ಲಿ ಹಾವು ಕಡಿತದ ತಡೆಗಟ್ಟುವಿಕೆ ಮತ್ತು ಸೂಕ್ತ ಔಷಧ ಲಭ್ಯವಾಗುವಂತೆ ಮಾಡಲು ಕೇಂದ್ರ ಸರ್ಕಾರ ರಾಷ್ಟ್ರೀಯ ಕ್ರಿಯಾ ಯೋಜನೆಯನ್ನು(NAPSE) ಪ್ರಾರಂಭಿಸಿದೆ.
* ಈಗಾಗಲೇ ಹಲವಾರು ರಾಜ್ಯಗಳು ಹಾವು ಕಡಿತವನ್ನು ಕಾಯಲೆ ಎಂದು ಘೋಷಿಸಿವೆ. ಇದುವರೆಗೂ ಇಂಥ ಘೋಷಣೆ ಮಾಡದ ರಾಜ್ಯಗಳಿಗೆ ಇಂಥ ಘೋಷಣೆ ಮಾಡುವಂತೆ ಸರ್ಕಾರ ತಿಳಿಸಿದೆ.
* ಕರ್ನಾಟಕ ದೇಶದಲ್ಲಿಯೇ ಮೊದಲ ಬಾರಿಗೆ ಹಾವು ಕಡಿತವನ್ನು ಕಾಯಿಲೆ ಎಂದು ಘೋಷಿಸಿತ್ತು. ಇತ್ತೀಚೆಗೆ ತಮಿಳುನಾಡು ಸರ್ಕಾರ ಕೂಡ ಇದನ್ನು ಕಾಯಿಲೆ ಎಂದು ಘೋಷಿಸಿದೆ.
* ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು(MoHFW) ಭಾರತದಲ್ಲಿ ಹಾವು ಕಡಿತದ ಪ್ರಕರಣಗಳು ಮತ್ತು ಸಾವುಗಳನ್ನು "ಅಧಿಕೃತ ರೋಗ" ಎಂದು ಘೋಷಿಸಿದ್ದು, ಎಲ್ಲಾ ಶಂಕಿತ, ಸಂಭವನೀಯ ಹಾವು ಕಡಿತದ ಪಕರಣಗಳನ್ನು ವರದಿ ಮಾಡುವುದನ್ನು ಕಡ್ಡಾಯಗೊಳಿಸಿದೆ.
* "ಹಾವು ಕಡಿತವು ಸಾರ್ವಜನಿಕ ಆರೋಗ್ಯದ ಕಾಳಜಿಯ ವಿಷಯವಾಗಿದೆ ಮತ್ತು ಕೆಲವು ಸಂದರ್ಭಗಳಲ್ಲಿ ಅವು ಮರಣ, ಅನಾರೋಗ್ಯ ಮತ್ತು ಅಂಗವೈಕಲ್ಯವನ್ನು ಉಂಟುಮಾಡುತ್ತವೆ. ರೈತರು, ಬುಡಕಟ್ಟು ಜನಸಂಖ್ಯೆ ಇತ್ಯಾದಿಗಳು ಹೆಚ್ಚಿನ ಅಪಾಯದಲ್ಲಿವೆ" ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ಪುಣ್ಯ ಸಲಿಲ ಶ್ರೀವಾಸ್ತವ ಅವರು ತಿಳಿಸಿದ್ದಾರೆ.
ಸೋಮವಾರ, 02 ಡಿಸೆಂಬರ್ 2024
11:40 ಪೂರ್ವಾಹ್ನ
Daily PDF
ಹಾವು ಕಡಿತ ಇನ್ನು ಘೋಷಿತ ಕಾಯಿಲೆ: ಕೇಂದ್ರ ಸರ್ಕಾರ
Authored by:
Jyoti Angadi