* ಬ್ಯಾಂಕ್‌ನಲ್ಲಿ ಕಾರ್ಯ ನಿರ್ವಹಿಸುವ ಗುಮಾಸ್ತರನ್ನು ಇನ್ನು ಮುಂದೆ ಗ್ರಾಹಕ ಸೇವಾ ಸಹಾಯಕ (ಕಸ್ಟಮರ್ ಸರ್ವೀಸ್ ಅಸೋಸಿಯೇಟ್-ಸಿಎಸ್ಎ) ಎಂದು ಕರೆಯಲಾಗುತ್ತದೆ.
* ಹುದ್ದೆಯ ಪದನಾಮ ಬದಲಾವಣೆಯು 2024ರ ನ.1ರಿಂದಲೇ ಅನ್ವಯವಾಗಿದೆ ಎಂದು ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಆಯೋಗ (ಐಬಿಪಿಎಸ್) ತಿಳಿಸಿದೆ.
* ಒಟ್ಟಾರೆ 6,128 ಕ್ಲರ್ಕ್‌ಗಳ ನೇಮಕಾತಿಗಾಗಿ ಐಬಿಪಿಎಸ್ ಕಳೆದ ಜೂನ್‌ನಲ್ಲಿ 14ನೇ ಆವೃತ್ತಿಯ ಅಧಿಸೂಚನೆಯನ್ನು ಹೊರಡಿಸಿತ್ತು. ಇದೀಗ ಈ ಹುದ್ದೆಗಳ ಪದನಾಮವನ್ನು ಸಿಎಸ್ಎ(ಕಸ್ಟಮರ್ ಸರ್ವೀಸ್ ಅಸೋಸಿಯೇಟ್-ಸಿಎಸ್ಎ) ಎಂದು ಬದಲಾಯಿಸಲಾಗಿದೆ ಎಂದು ತಿಳಿಸಿದೆ. ಇನ್ನುಳಿದಂತೆ ಅಧಿಸೂಚನೆಯಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಸ್ಪಷ್ಟಪಡಿಸಿದೆ.
ಮಂಗಳವಾರ, 05 ನವೆಂಬರ್ 2024
12:36 ಅಪರಾಹ್ನ
Daily PDF
ಗುಮಾಸ್ತರಲ್ಲ "ಗ್ರಾಹಕ ಸೇವಾ ಸಹಾಯಕ" ಎಂದು ಪದನಾಮ ಬದಲಾವಣೆ
Authored by:
Jyoti Angadi