* ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರುವರಿ 25 ರಂದು ಗುಜರಾತ್ನಲ್ಲಿ ಅತಿ ಉದ್ದದ ಸುದರ್ಶನ ಕೇಬಲ್ ಸೇತುವೆಯನ್ನು ಉದ್ಘಾಟಿಸಿದರು.
* ಈ ಸುದರ್ಶನ ಸೇತುವೆ 2.5 ಕಿ.ಮೀ ಉದ್ದದ ಕೇಬಲ್ ಸೇತುವೆಯಾಗಿದೆ. ಸುದರ್ಶನ ಸೇತುವೆಯನ್ನು ಸುಮಾರು 980 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.
* ಸುದರ್ಶನ ಕೇಬಲ್ ಸೇತುವೆಯನ್ನು ಓಖಾ-ಬೆಟ್ ದ್ವಾರಕಾ ಸಿಗ್ನೇಚರ್ ಸೇತುವೆ ಎಂದೂ ಕರೆಯಲಾಗುತ್ತದೆ.
* ಸುದರ್ಶನ ಕೇಬಲ್ ಸೇತುವೆ ನಿರ್ಮಾಣದ ಮೊದಲು ಯಾತ್ರಿಕರು ದ್ವಾರಕಾಧೀಶ್ ದೇವಾಲಯ ತಲುಪಲು ದೋಣಿಗಳನ್ನು ಅವಲಂಬಿಸಬೇಕಿತ್ತು. 2.5 ಕಿ.ಮೀ ಉದ್ದದ ಈ ಸೇತುವೆಯನ್ನು 979 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ನಾಲ್ಕು ಪಥದ 27.20 ಮೀಟರ್ ಅಗಲವಿದ್ದು ಪ್ರತಿ ಬದಿಯಲ್ಲಿ 2.50 ಮೀಟರ್ ಅಗಲದ ಕಾಲುದಾರಿಗಳನ್ನು ಹೊಂದಿದೆ.
* ಈ ಸೇತುವೆಯಿಂದ ಪ್ರಸಿದ್ಧ ದ್ವಾರಕಾಧೀಶ್ ದೇವಾಲಯಕ್ಕೆ ಭೇಟಿ ನೀಡುವ ಭಕ್ತರು ಮತ್ತು ಯಾತ್ರಿಕರಿಗೆ ಅನುಕೂಲವಾಗಲಿದೆ ಎಂದು 2.3 ಕಿ ಮೀ ಉದ್ದದ ಸೇತುವೆಗೆ 2017ರ ಅಕ್ಟೋಬರ್‌ನಲ್ಲಿ ಪ್ರಧಾನಿ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು.
ಗುಜರಾತ್ನಲ್ಲಿ ಭಾರತದ ಅತಿ ಉದ್ದದ ಸುದರ್ಶನ್ ಕೇಬಲ್ ಸೇತುವೆಯನ್ನು ಉದ್ಘಾಟಿಸಿದ ಪ್ರಧಾನಿ ಮೋದಿ
Published by Akshata Halli
26 ಫೆಬ್ರವರಿ 2024