➤ ದೇಶದಲ್ಲಿ ಹೂಡಿಕೆಯನ್ನು ಆಕರ್ಷಿಸುವ ಮತ್ತು ಉದ್ಯಮ ಸ್ನೇಹಿ ವಾತಾವರಣವನ್ನು ನಿರ್ಮಿಸುವ ನಿಟ್ಟಿನಲ್ಲಿ ನಿತಿ ಆಯೋಗ್ (NITI Aayog) ತನ್ನ ಚೊಚ್ಚಲ 'ಹೂಡಿಕೆ ಸ್ನೇಹಿ ಸೂಚ್ಯಂಕ' ವರದಿಯನ್ನು ಬಿಡುಗಡೆ ಮಾಡಿದೆ. ಕೇಂದ್ರ ಬಜೆಟ್‌ನಲ್ಲಿ ಘೋಷಣೆಯಾಗಿದ್ದ ಈ ಸೂಚ್ಯಂಕವನ್ನು ನಿತಿ ಆಯೋಗ್‌ನ ಉಪಾಧ್ಯಕ್ಷರಾದ ಅಶೋಕ್ ಕುಮಾರ್ ಲಾಹಿರಿ ಅವರು ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ. ರಾಜ್ಯಗಳ ನಡುವೆ ಆರೋಗ್ಯಕರ ಸ್ಪರ್ಧೆಯನ್ನು ಏರ್ಪಡಿಸುವ ಮತ್ತು ಹೂಡಿಕೆಗೆ ಇರುವ ಕಾನೂನು ಅಡೆತಡೆಗಳನ್ನು ನಿವಾರಿಸುವ ಉದ್ದೇಶವನ್ನು ಈ ವರದಿ ಹೊಂದಿದೆ.
➤ ಹೂಡಿಕೆ ಸ್ನೇಹಿ ಸೂಚ್ಯಂಕ: ಅಗ್ರಸ್ಥಾನ ಪಡೆದ ರಾಜ್ಯಗಳು: ಈ ಸೂಚ್ಯಂಕದಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಟ್ಟು 4 ವಿಭಾಗಗಳಾಗಿ ವರ್ಗೀಕರಿಸಲಾಗಿದೆ. ಭೌಗೋಳಿಕ ಮತ್ತು ಆರ್ಥಿಕ ರಚನೆಗೆ ಅನುಗುಣವಾಗಿ ಪ್ರಮುಖ ಮೂರು ವಿಭಾಗಗಳಲ್ಲಿ ರ‍್ಯಾಂಕಿಂಗ್ ನೀಡಲಾಗಿದೆ.
1. ದೊಡ್ಡ ರಾಜ್ಯಗಳ ವಿಭಾಗ: 
ದೊಡ್ಡ ರಾಜ್ಯಗಳ ಪಟ್ಟಿಯಲ್ಲಿ ಪಶ್ಚಿಮ ಭಾರತದ ಕೈಗಾರಿಕಾ ಹಬ್ ಆದ ಗುಜರಾತ್ ಒಟ್ಟು 100 ಕ್ಕೆ 56.6 ಅಂಕಗಳನ್ನು ಪಡೆಯುವ ಮೂಲಕ ದೇಶದಲ್ಲೇ ಅತ್ಯಂತ ಹೂಡಿಕೆ ಸ್ನೇಹಿ ರಾಜ್ಯವಾಗಿ ಹೊರಹೊಮ್ಮಿದೆ. ಮಹಾರಾಷ್ಟ್ರ ಮತ್ತು ತಮಿಳುನಾಡು ನಂತರದ ಸ್ಥಾನಗಳನ್ನು ಪಡೆದುಕೊಂಡಿವೆ.
01. ಗುಜರಾತ್:56.6 
02. ಮಹಾರಾಷ್ಟ್ರ:53.7 
03. ತಮಿಳುನಾಡು: 53.3 
04. ಗೋವಾ 
05. ಒಡಿಶಾ 
2. ಈಶಾನ್ಯ ಮತ್ತು ಗುಡ್ಡಗಾಡು ರಾಜ್ಯಗಳ ವಿಭಾಗ (Hilly & NE States)
  • ಪ್ರಥಮ ಸ್ಥಾನ: ಉತ್ತರಾಖಂಡ
  • ದ್ವಿತೀಯ ಸ್ಥಾನ: ಅಸ್ಸಾಂ
  • ತೃತೀಯ ಸ್ಥಾನ: ಹಿಮಾಚಲ ಪ್ರದೇಶ
3. ಕೇಂದ್ರಾಡಳಿತ ಪ್ರದೇಶಗಳು ಮತ್ತು ನಗರ ರಾಜ್ಯಗಳು (UTs & City States)
  • ಈ ವಿಭಾಗದಲ್ಲಿ ಗೋವಾ ಮೊದಲ ಸ್ಥಾನದಲ್ಲಿದ್ದರೆ, ದೆಹಲಿ ಮತ್ತು ಚಂಡೀಗಢ ನಂತರದ ಸ್ಥಾನಗಳಲ್ಲಿವೆ.
ಗಮನಿಸಿ: ಈ ಸೂಚ್ಯಂಕದಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ ಪ್ರದೇಶಗಳೆಂದರೆ ಲಕ್ಷದ್ವೀಪ, ಲಡಾಖ್ ಮತ್ತು ಅಂಡಮಾನ್ ನಿಕೋಬಾರ್ ದ್ವೀಪಗಳು. ದೊಡ್ಡ ರಾಜ್ಯಗಳ ಪೈಕಿ ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳ ಕೊನೆಯ ಸ್ಥಾನಗಳಲ್ಲಿವೆ.
➤ ಕರ್ನಾಟಕದ ಸ್ಥಾನ ಮತ್ತು ಪ್ರದರ್ಶನ : ನಿತಿ ಆಯೋಗ್‌ನ ಪ್ರಥಮ ಹೂಡಿಕೆ ಸ್ನೇಹಿ ಸೂಚ್ಯಂಕದಲ್ಲಿ 'ಫ್ರಂಟ್‌ರನ್ನರ್ಸ್' ವಿಭಾಗದಲ್ಲಿ ಸ್ಥಾನ ಪಡೆದಿರುವ ಕರ್ನಾಟಕವು, ದೇಶದ ಒಟ್ಟು ವಿದೇಶಿ ನೇರ ಹೂಡಿಕೆಯಲ್ಲಿ (FDI) 85% ಪಾಲು ಹೊಂದಿರುವ ಪ್ರಮುಖ 5 ರಾಜ್ಯಗಳಲ್ಲಿ ಒಂದಾಗುವುದರ ಜೊತೆಗೆ ವ್ಯವಹಾರದ ವಾತಾವರಣ (Business Climate) ಸ್ತಂಭದಲ್ಲಿ ದೇಶದಲ್ಲೇ 2ನೇ ಅತ್ಯುತ್ತಮ ಸ್ಥಾನವನ್ನು ಮುಡಿಗೇರಿಸಿಕೊಂಡಿದೆ.
➤ ಸೂಚ್ಯಂಕದ 8 ಪ್ರಮುಖ ಸ್ತಂಭಗಳು:
  1. ಮೂಲಸೌಕರ್ಯ 
  2. ವ್ಯವಹಾರದ ವಾತಾವರಣ
  3. ಸಂಪನ್ಮೂಲಗಳ ಲಭ್ಯತೆ 
  4. ಸರ್ಕಾರದ ನೀತಿಗಳು 
  5. ನಿಯಂತ್ರಕ ಸುಲಭತೆ 
  6. ಸಂಸ್ಥಾಗತ ಪರಿಸರ 
  7. ಹಣಕಾಸಿನ ಆರೋಗ್ಯ 
  8. ಪರಿಸರ ಸ್ಥಿತಿಸ್ಥಾಪಕತ್ವ 
ಇನ್ನು ಹೆಚ್ಚಿನ ಪ್ರಚಲಿತ ಘಟನೆಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ