* ಗ್ರಾಮೀಣ ಭಾರತದ ಸಾಕ್ಷರತೆಯ ಪ್ರಮಾಣವು ಕಳೆದ ದಶಕದಲ್ಲಿ ಶೇಕಡಾ 10 ಕ್ಕಿಂತ ಹೆಚ್ಚು ಏರಿಕೆಯಾಗಿದೆ ಎಂದು ಕೇಂದ್ರ ಶಿಕ್ಷಣ ಖಾತೆ ರಾಜ್ಯ ಸಚಿವ ಜಯಂತ್ ಚೌದರಿ ಲೋಕ ಸಭೆಯಲ್ಲಿ ತಿಳಿಸಿದ್ದಾರೆ
* ಸರ್ಕಾರದ ಅಂಕಿ ಅಂಶಗಳ ಪ್ರಕಾರ ಗ್ರಾಮೀಣ ಭಾರತದಲ್ಲಿನ ಸಾಕ್ಷರತೆಯ ಪ್ರಮಾಣವು 2011 ರಲ್ಲಿ 67.77% ರಿಂದ 2023-24 ರಲ್ಲಿ ಏಳು ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳಲ್ಲಿ 77.50% ಕ್ಕೆ ಏರಿದೆ.
* ಗ್ರಾಮೀಣ ಪ್ರದೇಶದಲ್ಲಿ ಮಹಿಳಾ ಸಾಕ್ಷರತೆ ಶೇ.57.93 ರಿಂದ ಶೇ.70.4ಕ್ಕೆ ಮತ್ತು ಪುರುಷರ ಸಾಕ್ಷರತೆ 77.15% ರಿಂದ 84.7% ಕ್ಕೆ ಸುಧಾರಿಸಿದೆ.
* ವಿಶೇಷವಾಗಿ ಗ್ರಾಮೀಣ ಭಾರತದಲ್ಲಿ ಸಾಕ್ಷರತೆಯ ಪ್ರಮಾಣವನ್ನು ಹೆಚ್ಚಿಸಲು ಹಲವಾರು ಕೇಂದ್ರ ಪ್ರಾಯೋಜಿತ ಯೋಜನೆಗಳನ್ನು ಪ್ರಾರಂಭಿಸಲಾಗಿದೆ. ಸಮಗ್ರ ಶಿಕ್ಷಾ ಅಭಿಯಾನ (2018-19 ರಿಂದ 2025-26), ಸಾಕ್ಷರ ಭಾರತ್ (2009-10 ರಿಂದ 2017-18), ಪಧನಾ ಲಿಖನಾ ಅಭಿಯಾನ (2020-21 ರಿಂದ 2021-22) ಉಲ್ಲಾಸ್-ನವ್ ಭಾರತ್ ಸಾಕ್ಷರತಾ ಕಾರ್ಯಕ್ರಮ (NILP) (2022-23 ರಿಂದ 2026-27) ಇಂತಹ ಮೊದಲಾದ ಕಾರ್ಯಕ್ರಗಳಿಂದ ಧನಾತ್ಮಕ ಫಲಿತಾಂಶ ಲಭಿಸಿದೆ.
* ಶಾಲೆಯಿಂದ ಹೊರಗುಳಿದವರಿಗೆ ಉಲ್ಲಾಸ್ ಅಪ್ಲಿಕೇಶನ್ ಅನ್ನು ರೂಪಿಸಲಾಗಿದೆ. ಇದು ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ರೊಂದಿಗೆ ಹೊಂದಿಕೆಯಾಗುವ ಕೇಂದ್ರ ಪ್ರಾಯೋಜಿತ ಉಪಕ್ರಮವಾಗಿದೆ.
* ಉಲ್ಲಾಸ್-ನವ್ ಭಾರತ್ ಸಾಕ್ಷರತಾ ಅಭಿಯಾನ 15 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವಯಸ್ಕರನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ. ಉಲ್ಲಾಸ್ ಅಪ್ಲಿಕೇಶನ್ ಅನ್ನು 26 ಭಾಷೆಗಳಲ್ಲಿ ಅಭಿವೃದ್ಧಿ ಪಡಿದಿಸಲಿದೆ.
ಗ್ರಾಮೀಣ ಸಾಕ್ಷರತೆ ಶೇ.10 ರಷ್ಟು ಹೆಚ್ಚಳ
Published by Jyoti Angadi
13 ಡಿಸೆಂಬರ್ 2024