Job Description: ➤ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು (MoRTH) ರಸ್ತೆ ಅಪಘಾತಗಳನ್ನು ತಡೆಯಲು ಮತ್ತು ವಾಹನ ಸಂಚಾರ ಸುರಕ್ಷತೆಯನ್ನು ಹೆಚ್ಚಿಸಲು ಒಂದು ಮಹತ್ವದ ನಿರ್ಧಾರ ಕೈಗೊಂಡಿದೆ. ದೇಶದಲ್ಲಿ ತಯಾರಾಗುವ ಹೊಸ ವಾಹನಗಳಲ್ಲಿ 'ವೆಹಿಕಲ್-ಟು-ವೆಹಿಕಲ್' (V2V - Vehicle-to-Vehicle) ಕಮ್ಯುನಿಕೇಷನ್ ವ್ಯವಸ್ಥೆಯನ್ನು ಹಂತ-ಹಂತವಾಗಿ ಕಡ್ಡಾಯಗೊಳಿಸಲು ಕೇಂದ್ರ ಮೋಟಾರು ವಾಹನ ನಿಯಮಗಳು, 1989 ರ ತಿದ್ದುಪಡಿಗೆ ಕರಡು ಅಧಿಸೂಚನೆ (Draft Notification) ಹೊರಡಿಸಿದೆ.➤ V2V (Vehicle-to-Vehicle) ಸಂಪರ್ಕ ತಂತ್ರಜ್ಞಾನ: 'ವೆಹಿಕಲ್-ಟು-ವೆಹಿಕಲ್' (V2V) ಎಂಬುದು ವೈರ್‌ಲೆಸ್ (Wireless) ಆಧಾರಿತ ಆಧುನಿಕ ತಂತ್ರಜ್ಞಾನವಾಗಿದೆ. ಇದು ರಸ್ತೆಯಲ್ಲಿ ಸಂಚರಿಸುವ ವಾಹನಗಳು ತಮ್ಮ ನಡುವೆ ರಿಯಲ್-ಟೈಮ್ (ನಿಜಾವಧಿಯ) ಮಾಹಿತಿಯನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲು ನೆರವಾಗುತ್ತದೆ. ವಿನಿಮಯವಾಗುವ ಮಾಹಿತಿ: ವಾಹನದ ವೇಗ (Speed), ಪ್ರಸ್ತುತ ಸ್ಥಳ (Position), ಚಲಿಸುವ ದಿಕ್ಸೂಚಿ (Direction) ಹಾಗೂ ತಕ್ಷಣದ ಬ್ರೇಕ್ ಹಾಕುವಿಕೆ (Acceleration/Braking). ಪ್ರಮುಖ ಅನುಕೂಲ: ಚಾಲಕನ ಕಣ್ಣಿಗೆ ಕಾಣಿಸದ ಅಥವಾ ದೂರದ ಅಪಾಯಗಳ ಕುರಿತು (Beyond line of sight) ಮುಂಚಿತವಾಗಿಯೇ ಮುನ್ಸೂಚನೆ ಹಾಗೂ ಮುನ್ನೆಚ್ಚರಿಕೆ ಸಂದೇಶ ನೀಡುತ್ತದೆ. ಇದು ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ (ADAS) ನೊಂದಿಗೆ ಸೇರಿ ಅಪಘಾತಗಳನ್ನು ತಡೆಯಲು ಸಹಾಯ ಮಾಡುತ್ತದೆ. ➤ ಅನುಷ್ಠಾನದ ಹಂತಗಳು ಮತ್ತು ವೇಳಾಪಟ್ಟಿ: ಕೇಂದ್ರ ಸರ್ಕಾರವು ವಾಹನ ತಯಾರಕರಿಗೆ (Vehicle Manufacturers) ತಾಂತ್ರಿಕವಾಗಿ ಸಿದ್ಧರಾಗಲು ಸಮಯಾವಕಾಶ ನೀಡಿ, ಹಂತ-ಹಂತವಾಗಿ ಈ ನಿಯಮವನ್ನು ಜಾರಿಗೆ ತರಲು ಯೋಜಿಸಿದೆ: ಅಕ್ಟೋಬರ್ 1, 2027 ರಿಂದ: L, M ಮತ್ತು N ವರ್ಗದ ವಾಹನಗಳಲ್ಲಿ V2V ವ್ಯವಸ್ಥೆಯನ್ನು ಅಳವಡಿಸಿದರೆ, ಅವು AIS-230 ಮಾನದಂಡಕ್ಕೆ ಕಡ್ಡಾಯವಾಗಿ ಒಳಪಟ್ಟಿರಬೇಕು. ಅಕ್ಟೋಬರ್ 1, 2028 ರಿಂದ: ತಯಾರಾಗುವ ಎಲ್ಲಾ ಹೊಸ L, M ಮತ್ತು N ವರ್ಗದ ವಾಹನಗಳಲ್ಲಿ AIS-230 ಮಾನದಂಡದ V2V ಕಮ್ಯುನಿಕೇಷನ್ ವ್ಯವಸ್ಥೆಯನ್ನು ಅಳವಡಿಸುವುದು ಕಡ್ಡಾಯವಾಗಿರುತ್ತದೆ. ➤ ವಾಹನಗಳ ವರ್ಗಗಳು (Vehicle Categories): L-ವರ್ಗ (Category L): ದ್ವಿಚಕ್ರ (Two-wheelers) ಮತ್ತು ತ್ರಿಚಕ್ರ (Three-wheelers) ವಾಹನಗಳು. M-ವರ್ಗ (Category M): ಕಾರುಗಳು, ಬಸ್‌ಗಳು ಮುಂತಾದ ಪ್ರಯಾಣಿಕರ ವಾಹನಗಳು (Passenger Vehicles). N-ವರ್ಗ (Category N): ಲಾರಿ, ಟ್ರಕ್‌ ಮುಂತಾದ ಸರಕು ಸಾಗಣೆ ವಾಹನಗಳು (Goods Vehicles). ➤ ತಾಂತ್ರಿಕ ನಿಯಮಗಳು ಮತ್ತು ಆವರ್ತನ ಶ್ರೇಣಿ: ಆವರ್ತನ ಶ್ರೇಣಿ (Frequency Band): V2V ಸಂಪರ್ಕಕ್ಕಾಗಿ 5.875 GHz ನಿಂದ 5.925 GHz (5.9 GHz range) ಆವರ್ತನ ಶ್ರೇಣಿಯನ್ನು ಬಳಸಲಾಗುತ್ತದೆ. ಲೈಸೆನ್ಸ್ ವಿನಾಯಿತಿ: ದೂರಸಂಪರ್ಕ ಇಲಾಖೆಯು (DoT) ಈ ಆವರ್ತನ ಶ್ರೇಣಿಯನ್ನು ಲೈಸೆನ್ಸ್ ರಹಿತವಾಗಿ ಬಳಸಲು ವಿನಾಯಿತಿ ನೀಡಿದೆ. AIS-230 ಮಾನದಂಡ: ಭಾರತೀಯ ರಸ್ತೆಗಳಿಗೆ ಸೂಕ್ತವಾಗುವಂತೆ ಸಿದ್ಧಪಡಿಸಲಾದ ತಾಂತ್ರಿಕ ಮಾನದಂಡ. ಇದು Cellular Vehicle-to-Everything (C-V2X) ತಂತ್ರಜ್ಞಾನವನ್ನು ಒಳಗೊಂಡಿದೆ. ಭದ್ರತೆ: ಸೈಬರ್ ಭದ್ರತೆ (Cybersecurity) ಮತ್ತು ಜಿಎನ್‌ಎಸ್ಎಸ್ (GNSS) ಆಧಾರಿತ ಸ್ಥಳ ಗುರುತಿಸುವಿಕೆ ವ್ಯವಸ್ಥೆ ಇರಲಿದೆ. ➤ V2V ತಂತ್ರಜ್ಞಾನದ ಪ್ರಮುಖ ಉಪಯೋಗಗಳು: ತುರ್ತು ಬ್ರೇಕ್ ಅಲರ್ಟ್ (Emergency Brake Alert): ಮುಂದೆ ಹೋಗುತ್ತಿರುವ ವಾಹನ ದಿಢೀರನೆ ಬ್ರೇಕ್ ಹಾಕಿದರೆ ಹಿಂದಿನ ವಾಹನಕ್ಕೆ ಎಚ್ಚರಿಕೆ ರವಾನೆಯಾಗುತ್ತದೆ. ನೇರ ಡಿಕ್ಕಿ ಮುನ್ಸೂಚನೆ (Forward Collision Warning): ಮುಂದೆ ಸಂಭವಿಸಬಹುದಾದ ಡಿಕ್ಕಿಯ ಕುರಿತು ಚಾಲಕನಿಗೆ ಮುಂಚಿತವಾಗಿ ಎಚ್ಚರಿಸುತ್ತದೆ. ತಪ್ಪು ಹಾದಿ ಚಾಲನೆ ಎಚ್ಚರಿಕೆ (Wrong-way Driving): ಏಕಮುಖ ರಸ್ತೆಯಲ್ಲಿ ಎದುರಾಗಿ ಬರುವ ವಾಹನಗಳ ಕುರಿತು ಸೂಚಿಸುತ್ತದೆ. ತುರ್ತು ವಾಹನಗಳ ಮುನ್ಸೂಚನೆ (Emergency Vehicle Alert): ಆಂಬ್ಯುಲೆನ್ಸ್ ಅಥವಾ ಅಗ್ನಿಶಾಮಕ ವಾಹನಗಳು ಹತ್ತಿರ ಬರುತ್ತಿದ್ದಾಗ ಇತರ ವಾಹನಗಳಿಗೆ ದಾರಿ ಬಿಡಲು ಮುನ್ಸೂಚನೆ ನೀಡುತ್ತದೆ.