* ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಆಗಸ್ಟ್ 28 ರಂದು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅಡಿಯಲ್ಲಿ 78 ವರ್ಷದ ಪಾಕಿಸ್ತಾನಿ ಕ್ರಿಶ್ಚಿಯನ್ ಧರ್ಮದ ಜೋಸೆಫ್ ಫ್ರಾನ್ಸಿಸ್ ಎ.ಪೆರೇರಾ ಅವರಿಗೆ ಭಾರತೀಯ ಪೌರತ್ವ ಪ್ರಮಾಣಪತ್ರವನ್ನು ಹಸ್ತಾಂತರಿಸಿದರು.
* ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅಡಿಯಲ್ಲಿ ಭಾರತೀಯ ಪೌರತ್ವವನ್ನು ಪಡೆದ ಗೋವಾದಲ ಮೊದಲ ವ್ಯಕ್ತಿಯಾಗಿದ್ದಾರೆ.
* ಜೋಸೆಫ್ ಫ್ರಾನ್ಸಿಸ್ ಪಿರೇರಾ ಅವರು ಮೂಲತಃ ದಕ್ಷಿಣ ಗೋವಾದ ಪರೋಡ ಗ್ರಾಮದವರಾಗಿದ್ದು, ಅಧ್ಯಯನಕ್ಕಾಗಿ ಗೋವಾದಿಂದ ಪಾಕಿಸ್ತಾನಕ್ಕೆ ತೆರಳಿದ್ದರು ಮತ್ತು ನಂತರ ಅಲ್ಲಿ ಉದ್ಯೋಗವನ್ನು ಪಡೆದರು. ಅವರು ಪಾಕಿಸ್ತಾನದ ಪೌರತ್ವವನ್ನು ಪಡೆದರು ಮತ್ತು 2013 ರಲ್ಲಿ ಕರಾಚಿಯಲ್ಲಿ ವಾಸಿಸುತ್ತಿದ್ದರು.
* ಡಿಸೆಂಬರ್ 31, 2014 ರಂದು ಅಥವಾ ಅದಕ್ಕೂ ಮೊದಲು ಭಾರತಕ್ಕೆ ಬಂದ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ ಕಿರುಕುಳಕ್ಕೊಳಗಾದ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ರಾಷ್ಟ್ರೀಯತೆಯನ್ನು ನೀಡಲು CAA ಅನ್ನು ಡಿಸೆಂಬರ್ 2019 ರಲ್ಲಿ ಜಾರಿಗೊಳಿಸಲಾಗಿದೆ. ಇದರಲ್ಲಿ ಹಿಂದೂಗಳು, ಸಿಖ್ಖರು, ಜೈನರು, ಬೌದ್ದರು ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರು ಸೇರಿದ್ದಾರೆ.
* ಪಿರೇರಾ ಅವರು ಗೋವಾದ ಮಹಿಳೆಯನ್ನು ಮಾಡುವೆ ಆಗಿದ್ದರು ಭಾರತದ ಪೌರತ್ವ ಲಬಿಸಿರಲಿಲ್ಲ. ನರೇಂದ್ರ ಮೋದಿ ಅವರ ಸರ್ಕಾರವು ಪೌರತ್ವ ಕಾಯಿದೆಯ ತಿದ್ದುಪಡಿ ಮಾಡಿದ್ದರಿಂದಾಗಿ ಅವರಿಗೆ ಪೌರತ್ವ ಪಡೆಯಲು ಸಾಧ್ಯವಾಯಿತು.
ಗೋವಾ: CAA ಅಡಿಯಲ್ಲಿ ಭಾರತೀಯ ಪೌರತ್ವ ಪಡೆದ ಮೊದಲ ಪಾಕಿಸ್ತಾನಿ ಕ್ರಿಶ್ಚಿಯನ್
Published by Jyoti Angadi
29 ಆಗಸ್ಟ್ 2024