* ಕೇರಳದ ಉತ್ತರ ಪಾಲಕ್ಕಾಡ್ ಜಿಲ್ಲೆಯ ಖ್ಯಾತ ವಕೀಲರಾದ ಪಿ ಬಾಲಸುಬ್ರಮಣ್ಯಂ ಮೆನನ್ ಅವರು ಸುದೀರ್ಘ ಕಾಲ ವಕೀಲಿ ವೃತ್ತಿ ನಡೆಸಿ ದಾಖಲೆ ನಿರ್ಮಿಸಿದ್ದಾರೆ.
* ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಪ್ರಕಾರ, 98 ವರ್ಷದ ಮೆನನ್ 73 ವರ್ಷ 60 ದಿನಗಳಿಂದ ವಕೀಲರಾಗಿ ಕಾರ್ಯನಿರ್ವಹಿಸಿದ್ದಾರೆ. ಇದನ್ನು 2023ರ ಸೆಪ್ಟೆಂಬರ್ 11ರಂದು ದಾಖಲೆ ಪುಸ್ತಕಗಳಲ್ಲಿ ದಾಖಲಿಸಲಾಗಿದೆ.
* ಮೆನನ್ ಅವರಿಗಿಂತ ಮೊದಲು, ಜಿಬ್ರಾಲ್ಟರ್ ಸರ್ಕಾರದ ವಕೀಲ ಲೂಯಿಸ್ ಟ್ರಾಯ್ ಅವರು ಸುದೀರ್ಘ ಅವಧಿಯ ವಕೀಲರ ದಾಖಲೆಯನ್ನು ಹೊಂದಿದ್ದರು. ಟ್ರಾಯ್ 70 ವರ್ಷ 311 ದಿನಗಳ ದಾಖಲೆ ಮಾಡಿದ್ದರು. ಲೂಯಿಸ್ ಈ ವರ್ಷದ ಫೆಬ್ರವರಿಯಲ್ಲಿ 94ನೇ ವಯಸ್ಸಿನಲ್ಲಿ ನಿಧನರಾದರು.
ಶನಿವಾರ, 11 ನವೆಂಬರ್ 2023
10:27 ಪೂರ್ವಾಹ್ನ
Daily PDF
ಗಿನ್ನಿಸ್ ದಾಖಲೆ ನಿರ್ಮಿಸಿದ ಖ್ಯಾತ ವಕೀಲ
Authored by:
Tajabi Pathan