➤ ಆಫ್ರಿಕಾ ಖಂಡದ ಪಶ್ಚಿಮ ಕರಾವಳಿ ದೇಶವಾದ ಘಾನಾ, ಭಾರತದ ನೇತೃತ್ವದ 'ಅಂತರರಾಷ್ಟ್ರೀಯ ಬಿಗ್ ಕ್ಯಾಟ್ ಅಲೈಯನ್ಸ್' (IBCA) ಒಕ್ಕೂಟಕ್ಕೆ ಅಧಿಕೃತವಾಗಿ ಸದಸ್ಯ ರಾಷ್ಟ್ರವಾಗಿ ಸೇರ್ಪಡೆಯಾಗಿದೆ.
➤ ಇತ್ತೀಚೆಗೆ ಆಫ್ರಿಕಾ ಪ್ರವಾಸದಲ್ಲಿದ್ದ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ (Dr. S. Jaishankar) ಅವರಿಗೆ ಘಾನಾದ ವಿದೇಶಾಂಗ ಸಚಿವ ಸ್ಯಾಮುಯೆಲ್ ಒಕುಡ್ಡೆಟೊ ಅಬ್ಲಾಕ್ವಾ (Samuel Okudzeto Ablakwa) ಅವರು ಅಧಿಕೃತ 'ಸ್ವೀಕೃತಿ ಪತ್ರ' (Instrument of Acceptance) ಹಸ್ತಾಂತರಿಸಿದರು. ಈ ಮೂಲಕ ವಿಶ್ವದಲ್ಲಿ ದೊಡ್ಡ ಬೆಕ್ಕುಗಳ ಪ್ರಭೇದಗಳ ಸಂರಕ್ಷಣೆಗೆ ಭಾರತ ಕೈಗೊಂಡಿರುವ ಜಾಗತಿಕ ಕಾರ್ಯಕ್ರಮಕ್ಕೆ ಮತ್ತೊಂದು ಆಫ್ರಿಕನ್ ದೇಶ ಬೆಂಬಲ ಸೂಚಿಸಿದಂತಾಗಿದೆ.
➤ ರಾಜತಾಂತ್ರಿಕ ಭೇಟಿ: ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರ ಮೂರು ಆಫ್ರಿಕನ್ ದೇಶಗಳ (ಘಾನಾ, ಕೋಟ್ ದಿ ಐವೋರ್ ಮತ್ತು ಇಥಿಯೋಪಿಯಾ) ಪ್ರವಾಸದ ಮೊದಲ ಭಾಗವಾಗಿ ಘಾನಾದ ಅಕ್ರಾ (Accra) ನಗರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಒಪ್ಪಂದ ನಡೆಯಿತು.
➤ ದಕ್ಷಿಣ-ದಕ್ಷಿಣ ಸಹಕಾರ (South-South Cooperation): ಈ ಸೇರ್ಪಡೆಯು ಭಾರತ ಮತ್ತು ಆಫ್ರಿಕಾ ದೇಶಗಳ ನಡುವಿನ ರಾಜತಾಂತ್ರಿಕ, ಪರಿಸರ ಮತ್ತು ಜೀವವೈವಿಧ್ಯ ಸಂರಕ್ಷಣೆಯ ಸಹಕಾರವನ್ನು ಹೆಚ್ಚಿಸಲಿದೆ.
➤ 'ಇಂಟರ್ನ್ಯಾಷನಲ್ ಬಿಗ್ ಕ್ಯಾಟ್ ಅಲೈಯನ್ಸ್' (IBCA): International Big Cat Alliance ಎಂಬುದು ಪ್ರಪಂಚದ 7 ಪ್ರಮುಖ 'ದೊಡ್ಡ ಬೆಕ್ಕು' (Big Cats) ಜಾತಿಯ ಪ್ರಾಣಿಗಳು ಮತ್ತು ಅವುಗಳ ಸ್ವಾಭಾವಿಕ ವಾಸಸ್ಥಳಗಳನ್ನು (Habitats) ಸಂರಕ್ಷಿಸಲು ಸ್ಥಾಪಿಸಲಾದ ಒಪ್ಪಂದ-ಆಧಾರಿತ ಅಂತರ್-ಸರ್ಕಾರಿ ಸಂಸ್ಥೆಯಾಗಿದೆ.
- ಪ್ರಾರಂಭಿಸಿದ ದಿನಾಂಕ: 9 ಏಪ್ರಿಲ್ 2023   
- ಸಂದರ್ಭ: ಭಾರತದಲ್ಲಿ 'ಪ್ರಾಜೆಕ್ಟ್ ಟೈಗರ್' (Project Tiger) ಯೋಜನೆಯ 50ನೇ ವರ್ಷಾಚರಣೆಯ ನೆನಪಿಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕರ್ನಾಟಕದ ಮೈಸೂರಿನಲ್ಲಿ ಇದನ್ನು ಚಾಲನೆಗೊಳಿಸಿದರು.   
➤ IBCA ಸಂಸ್ಥೆಯು 7 ಪ್ರಮುಖ ಪ್ರಾಣಿ ಪ್ರಭೇದಗಳ {ಹುಲಿ (Tiger)   ಸಿಂಹ (Lion)   ಚಿರತೆ (Leopard)ಹಿಮಚಿರತೆ (Snow Leopard)   ಚೀತಾ (Cheetah)   ಜಾಗ್ವಾರ್ (Jaguar)   ಪ್ಯೂಮಾ (Puma) }  ಸಂರಕ್ಷಣೆಗೆ ಜಾಗತಿಕ ಮಟ್ಟದಲ್ಲಿ ಕೆಲಸ ಮಾಡುತ್ತದೆ