* ಉತ್ತರ ಕರ್ನಾಟಕದ ಕೈಮಗ್ಗ ಪರಂಪರೆಯ ಆಕರ್ಷಣೆಯಾಗಿರುವ ಪಟ್ಟೇದ ಅಂಚು ಸೀರೆಗೆ ಭೌಗೋಳಿಕ ಮಾನ್ಯತೆ (ಜಿಐ) ಲಭಿಸಿದೆ.
* ಬೆಂಗಳೂರಿನ ರಾಮಯ್ಯ ಕಾನೂನು ಕಾಲೇಜು ಬೌದ್ಧಿಕ ಆಸ್ತಿ ಹಕ್ಕು ಕೇಂದ್ರ (ಆರ್‌ಸಿಐಪಿಆರ್) ಮತ್ತು ಜಿಐ ಮಾನ್ಯತೆಯ ನೋಡಲ್ ಏಜೆನ್ಸಿಯಾದ ವಿಶ್ವೇಶ್ವರಯ್ಯ ಉತ್ತೇಜನ ಕೇಂದ್ರ (ವಿಟಿಪಿಸಿ) ಸಹಯೋಗದಲ್ಲಿ ಜಿಐ ನೋಂದಣಿಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರೈಸಲಾಗಿದೆ.
* ಕಠಿಣವಾದ ಜಿಐ ನೋಂದಣಿ ಪ್ರಕ್ರಿಯೆಯನ್ನು ಪೂರೈಸಲು ರಾಜ್ಯ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಅಗತ್ಯ ಮಾರ್ಗದರ್ಶನ ನೀಡಿದೆ.
* ಗದಗ ಜಿಲ್ಲೆಯ ಗಜೇಂದ್ರಗಡ ನೇಕಾರರ ಸಹಕಾರಿ ಉತ್ಪಾದಕ ಸಂಘಕ್ಕೆ ಜಿಐ ಮಾನ್ಯತೆಯನ್ನು ನೀಡಲಾಗಿದೆ. ಪಟ್ಟೇದ ಅಂಚು ಸೀರೆಯು ಗಾಢವಾದ ಬಣ್ಣ ಮತ್ತು ವಿಶಿಷ್ಟವಾದ ಅಂಚು ಮೂಲಕ ಖ್ಯಾತಿ ಗಳಿಸಿದೆ.
ಗದಗ ಪಟ್ಟೇದ ಅಂಚು ಸೀರೆಗೆ ಜಿಐ ಮಾನ್ಯತೆ
Published by Jyoti Angadi
12 ಏಪ್ರಿಲ್ 2025