➤ GAGAN (GPS Aided GEO Augmented Navigation) ಭಾರತದ Satellite Based Augmentation System (SBAS) ಆಗಿದ್ದು, ಇದನ್ನು ISRO ಹಾಗೂ Airports Authority of India (AAI) ಜಂಟಿಯಾಗಿ ಅಭಿವೃದ್ಧಿಪಡಿಸಿವೆ.ಈ ವ್ಯವಸ್ಥೆ GPS ಸಂಕೇತಗಳಲ್ಲಿರುವ ದೋಷಗಳನ್ನು ತಕ್ಷಣವೇ ಸರಿಪಡಿಸಿ ಅತ್ಯಂತ ನಿಖರವಾದ ಸ್ಥಳ ಮಾಹಿತಿ (Positioning), ವಿಶ್ವಾಸಾರ್ಹತೆ (Integrity) ಹಾಗೂ ಲಭ್ಯತೆ (Availability) ಒದಗಿಸುತ್ತದೆ. ಇದರ ಮೂಲಕ ವಿಮಾನಗಳ ಸುರಕ್ಷಿತ ಸಂಚಾರ ಹಾಗೂ ಲ್ಯಾಂಡಿಂಗ್ ಸಾಧ್ಯವಾಗುತ್ತದೆ.
➤ 2026ರ ಜೂನ್‌ನಲ್ಲಿ ಭಾರತದ ನಾಗರಿಕ ವಿಮಾನಯಾನ ಕ್ಷೇತ್ರವು ಮಹತ್ವದ ಸಾಧನೆ ಮಾಡಿತು.
- GAGAN ಬಳಸಿ ಭಾರತದ ಮೊದಲ Satellite-Based Landing System Approach ಅನ್ನು ವಾಣಿಜ್ಯ ಜೆಟ್ ವಿಮಾನದಲ್ಲಿ ಯಶಸ್ವಿಯಾಗಿ ನಡೆಸಲಾಯಿತು.
- DGCA ಮೇಲ್ವಿಚಾರಣೆಯಲ್ಲಿ ಇಂಡಿಗೋ ಏರ್‌ಬಸ್ A320 ವಿಮಾನವು ಉದಯಪುರ ವಿಮಾನ ನಿಲ್ದಾಣದಲ್ಲಿ GAGAN ನೆರವಿನಿಂದ ಸುರಕ್ಷಿತವಾಗಿ ಇಳಿಯಿತು.
- ಇದರಿಂದ ಭಾರತದ ಉಪಗ್ರಹ ಆಧಾರಿತ ವಿಮಾನ ಸಂಚಾರ ವ್ಯವಸ್ಥೆಗೆ ಹೊಸ ಅಧ್ಯಾಯ ಆರಂಭವಾಯಿತು.
- ✈️ ನಾಗರಿಕ ವಿಮಾನಯಾನ
- 🚢 ಸಮುದ್ರ ನ್ಯಾವಿಗೇಶನ್ (Marine Navigation)
- 🚆 ರೈಲ್ವೆ ನ್ಯಾವಿಗೇಶನ್
- 🚗 Intelligent Transport Systems
- 🌪️ ವಿಪತ್ತು ನಿರ್ವಹಣೆ
- 🛰️ ಭೂಮಾಪನ ಹಾಗೂ Mapping
- 📡 ದೂರಸಂಪರ್ಕ ಸೇವೆಗಳು
- 🛡️ ರಕ್ಷಣಾ ಹಾಗೂ ಭದ್ರತಾ ಕ್ಷೇತ್ರ
- 🌊 ಮೀನುಗಾರರಿಗೆ ನಿಖರ ಸಮುದ್ರ ಮಾಹಿತಿ ಮತ್ತು ನ್ಯಾವಿಗೇಶನ್ ನೆರವು