* ಯುದ್ದದಿಂದ ತತ್ತರಿಸಿದ ಗಾಜಾ ಜನತೆಗೆ ನೆರವಿನ ಹಸ್ತ ಚಾಚಲು ಭಾರತ ಮುಂದಾಗಿದೆ.ಭಾರತದ ಪರವಾಗಿ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ ಅವರು ಪಾಲ್ಗೊಳುತ್ತಿದ್ದಾರೆ.ಇವರು ಗಾಜಾ ಕುರಿತು ಶರ್ಮ ಎಲ್-ಶೇಖ ಶಾಂತಿ ಶೃಂಗ ಸಭೆಯಲ್ಲಿ ಭಾರತವನ್ನು ಪ್ರತಿನಿದಿಸಿದ್ದು,ಗಾಜಾದ ಜನರಿಗೆ ಮಾನವೀಯ ನೆರವಿನ ರೂಪದಲ್ಲಿ ಪರಿಹಾರ ಸಾಮಗ್ರಿಗಳನ್ನು ನೀಡಲಾಗುವುದು ಎಂಬ ಭರವಸೆ ನೀಡಿದ್ದಾರೆ.
* ಗಾಜಾ ಶಾಂತಿ ಶೃಂಗ ಸಭೆಗೆ ಭಾರತದ ಪ್ರಧಾನಿ ಮೋದಿ ಅವರಿಗೆ ಟ್ರಂಪ ಅವರಿಂದ ಆಹ್ವಾನ.ಆದರೆ ಪ್ರಧಾನಿ ಮೋದಿ ಅವರು ವೈಯಕ್ತಿಕವಾಗಿ ಭಾಗವಹಿಸುವುದಿಲ್ಲ.ಭಾರತದ ಪರವಾಗಿ ವಿದೇಶಾಂಗ ಸಚಿವಾಲಯದ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ ಅವರುಈ ಉನ್ನತ ಮಟ್ಟದ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.
* ಇಂದು ನಡೆಯಲಿರುವ ಈ ಗಾಜಾ ಶೃಂಗ ಸಭೆಯಲ್ಲಿ ಗಾಜಾ ಪಟ್ಟಿಯಲ್ಲಿ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸುವ ಗುರಿಯನ್ನು ಹೊಂದಿದೆ.ಈ ಸಭೆಯು ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ ಮತ್ತು ಸಹ ಅದ್ಯಕ್ಷತೆಯಲ್ಲಿ ನಡೆಯಲಿದ್ದು,ವಿಶ್ವದ 20 ಕ್ಕೂ ಹೆಚ್ಚು ದೇಶಗಳ ನಾಯಕರು ಭಾಗವಹಿಸಲಿದ್ದಾರೆ.
* ಗಾಜಾ ಶಾಂತಿ ಸಭೆಯ ಉದ್ದೇಶಗಳು:
* ಗಾಜಾ ಪಟ್ಟಿಯಲ್ಲಿ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸುವುದು.
* ಮದ್ಯ ಪ್ರಾಚ್ಯದಲ್ಲಿ ಶಾಂತಿ ಮತ್ತಿ ಸ್ಥಿರತೆಯನ್ನು ಹೆಚ್ಚಿಸುವುದು,ಈ ಪ್ರದೇಶಗಳಲ್ಲಿ ಹೊಸ ಭದ್ರತಾ ಯುಗವನ್ನು ಪ್ರಾಂಭಿಸುವುದು.
* ಇಸ್ರೇಲ್ ಕದನ ವಿರಾಮ ಘೋಷಿಸಿ,ಕೆಲವು ಪಡೆಗಳನ್ನು ಹಿಂಪಡೆಯುವುದು.
* ಈ ಶೃಂಗ ಸಭೆಯು,ಹಮಾಸ್ ಅಕ್ಟೋಬರ್ 7 ,2023 ರಂದು ಇಸ್ರೇಲ್ ಮೇಲೆ ನಡೆಸಿದೆ.
* ಭಾರತವು ಗಾಜಾ ಜನತೆಗೆ ಆಹಾರ ಸಾಮಗ್ರಿಗಳನ್ನು,ಮಹಿಳೆಯರಿಗೆ ಅಗತ್ಯ ವಸ್ತುಗಳನ್ನು,ಮತ್ತು ಶಿಶು ಪೌಷ್ಟಿಕ ಆಹಾರ ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ಕಳುಹಿಸಲಿದೆ.
* ಅಮೇರಿಕಾದ ಅಂದಾಜಿನಲ್ಲಿ ಗಾಜಾ ಪುನರ್ ನಿರ್ಮಾಣಕ್ಕೆ ಸುಮಾರು 70 ಬಿಲಿಯನ್ ಡಾಲರಗಳ ಅಗತ್ಯವಿದೆ.ಹಾಗೆಯೆ,ಗಾಜಾ ನಗರದಲ್ಲಿ ಶೇ.83 ರಷ್ಟುಕಟ್ಟಡಗಳು ಸಂಪೂರ್ಣವಾಗಿ ನಾಶವಾಗಿವೆ ಎಂದು ಹೇಳಲಾಗುತ್ತಿದೆ.
* ಭಾರತ ಗಾಜಾ ಶಾಂತಿ ನಿಲುವಿಗೆ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಪ್ರಮಾಣೀಕರಿಸಿರುತ್ತದೆ.ಅದು ಮಾನವೀಯತೆ ದೃಷ್ಟಿಯಿಂದ ಎಂದು ಹೇಳಲಾಗುತ್ತದೆ.
Test Your Knowledge!
Attempt daily current affairs quizzes to boost your exam readiness.
Discussion & Comments (0)
Have a query or thoughts about this current affair?
No comments on this article yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.