➤ ಗ್ರಾಹಕರಲ್ಲಿ ಜಾಗೃತಿ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಜುಲೈ 1, 2027 ರಿಂದ ಭಾರತದಲ್ಲಿ ಮಾರಾಟವಾಗುವ ಎಲ್ಲಾ ಮಾನ್ಯತೆ ಪಡೆದ ವೆಗಾನ್ ಆಹಾರ ಉತ್ಪನ್ನಗಳ ಪ್ಯಾಕೇಜ್‌ಗಳ ಮೇಲೆ ಈ ಲೋಗೋವನ್ನು ಪ್ರದರ್ಶಿಸುವುದು ಕಡ್ಡಾಯವಾಗಿರುತ್ತದೆ.
➤ ವೆಗಾನ್ ಆಹಾರ ಉತ್ಪನ್ನಗಳ ಲೋಗೋದ ವಿನ್ಯಾಸ:
- ಹಸಿರು ಚೌಕಟ್ಟು (Green Square): ಪರಿಸರ ಸ್ನೇಹಿ ಮತ್ತು ಸಸ್ಯ ಆಧಾರಿತ ಆಹಾರವನ್ನು ಇದು ಬಿಂಬಿಸುತ್ತದೆ.
- ಇಂಗ್ಲಿಷ್ 'V' ಅಕ್ಷರ: ಮಧ್ಯಭಾಗದಲ್ಲಿ ದೊಡ್ಡದಾದ ಹಸಿರು ಬಣ್ಣದ 'V' ಅಕ್ಷರವಿದ್ದು, ಅದು ವೆಗಾನ್ (Vegan) ಎಂಬುದನ್ನು ಸೂಚಿಸುತ್ತದೆ.
- ಮೊಳಕೆಯೊಡೆಯುವ ಎಲೆ (Sprouting Leaf): 'V' ಅಕ್ಷರದ ಮೇಲ್ಭಾಗದಲ್ಲಿ ಸಣ್ಣದಾದ ಚಿಗುರೆಲೆಯ ಚಿಹ್ನೆಯನ್ನು ನೀಡಲಾಗಿದೆ, ಇದು ಸುಸ್ಥಿರತೆ (Sustainability) ಮತ್ತು ನೈಸರ್ಗಿಕ ಮೂಲವನ್ನು ಪ್ರತಿನಿಧಿಸುತ್ತದೆ.
- ಮಾಂಸ ಮತ್ತು ಮೀನು: ಎರಡೂ ಪದ್ಧತಿಗಳಲ್ಲಿ ಮಾಂಸ, ಕೋಳಿ ಮತ್ತು ಮೀನುಗಳನ್ನು ಸಂಪೂರ್ಣವಾಗಿ ತಿನ್ನುವುದಿಲ್ಲ.
- ಡೈರಿ ಉತ್ಪನ್ನಗಳು: ವೆಜಿಟೇರಿಯನ್ನರು ಹಾಲು, ಮೊಸರು, ತುಪ್ಪ ಮತ್ತು ಪನ್ನೀರ್ ಸೇವಿಸುತ್ತಾರೆ. ಆದರೆ, ವೆಗಾನ್ ಪದ್ಧತಿಯಲ್ಲಿ ಹಾಲಿನ ಉತ್ಪನ್ನಗಳನ್ನು ಬಳಸುವುದಿಲ್ಲ.
- ಜೇನುತುಪ್ಪ: ಸಸ್ಯಾಹಾರಿಗಳು ಜೇನುತುಪ್ಪವನ್ನು ಬಳಸುತ್ತಾರೆ. ಆದರೆ, ವೆಗಾನ್ ಫಾಲೋ ಮಾಡುವವರು ಜೇನುತುಪ್ಪವನ್ನು ತಿನ್ನುವುದಿಲ್ಲ.
- ಆಹಾರದ ಮೂಲ: ವೆಜಿಟೇರಿಯನ್ ಆಹಾರದಲ್ಲಿ ಸಸ್ಯ ಮತ್ತು ಹಾಲಿನ ಉತ್ಪನ್ನಗಳಿರುತ್ತವೆ. ಆದರೆ, ವೆಗಾನ್ ಆಹಾರದಲ್ಲಿ ಕೇವಲ ಸಸ್ಯ ಮೂಲದ (ಬಾದಾಮಿ ಹಾಲು, ಸೋಯಾ ಹಾಲು ಇತ್ಯಾದಿ) ಪದಾರ್ಥಗಳು ಮಾತ್ರ ಇರುತ್ತವೆ.
ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲೂ ವೆಗಾನ್ ಸಂಸ್ಕೃತಿ (Plant-based Diet) ವೇಗವಾಗಿ ಬೆಳೆಯುತ್ತಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಸಹಾಯ ಮಾಡಲು ಈ ನಿಯಮ ತರಲಾಗಿದೆ:
- ಗೊಂದಲ ನಿವಾರಣೆ: ಈ ಮೊದಲು ವೆಗಾನ್ ಗ್ರಾಹಕರು ಉತ್ಪನ್ನದ ಹಿಂದಿರುವ ಇಂಗ್ರಿಡಿಯಂಟ್ಸ್ ಲಿಸ್ಟ್ ಅನ್ನು ಸೂಕ್ಷ್ಮವಾಗಿ ಗಮನಿಸಬೇಕಾಗುತ್ತಿತ್ತು. ಈ ಲೋಗೋದಿಂದ ನೇರವಾಗಿ ಗುರುತಿಸಬಹುದು.
- ತಪ್ಪು ಜಾಹೀರಾತುಗಳಿಗೆ ಬ್ರೇಕ್: ಕಂಪನಿಗಳು ತಮ್ಮ ಉತ್ಪನ್ನಗಳನ್ನು ಸುಳ್ಳಾಗಿ 'ವೆಗಾನ್' ಎಂದು ಮಾರ್ಕೆಟಿಂಗ್ ಮಾಡುವುದನ್ನು ಇದು ತಡೆಯುತ್ತದೆ.
- ನಿಯಂತ್ರಣ ಮತ್ತು ಗುಣಮಟ್ಟ: ಮೇ 21, 2026 ರಂದು ಹೊರಡಿಸಲಾದ ತಿದ್ದುಪಡಿ ನಿಯಮಾವಳಿಗಳ ಪ್ರಕಾರ, FSSAI ಅನುಮೋದನೆ ನೀಡಿದ ಉತ್ಪನ್ನಗಳಿಗೆ ಮಾತ್ರ ಈ ಲೋಗೋ ಬಳಸಲು ಅನುಮತಿ ಸಿಗಲಿದೆ.
ಪ್ರಚಲಿತ ಘಟನೆಗಳ ಆಧಾರಿತ ಪ್ರತಿದಿನದ ಹಾಗೂ ವಾರಾಂತ್ಯದ ಕ್ವಿಜ್ ನಲ್ಲಿ ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ