➤ 'ಫೇಸ್ ಅಥೆಂಟಿಕೇಶನ್' ವ್ಯವಸ್ಥೆ: ಅಭ್ಯರ್ಥಿಗಳು ಯುಪಿಎಸ್‌ಸಿ ಪರೀಕ್ಷೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ಅಪ್‌ಲೋಡ್ ಮಾಡಿದ್ದ ಫೋಟೋವನ್ನು, ಅವರು ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸುವಾಗ ಇರುವ ಮುಖದೊಂದಿಗೆ (Live Face) ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ತಾಳೆ ನೋಡಿ (Match) ದೃಢೀಕರಿಸಲಾಗುತ್ತದೆ. ಅಂದರೆ, ಅರ್ಜಿ ಹಾಕಿದ ಅಸಲಿ ಅಭ್ಯರ್ಥಿಯೇ ಪರೀಕ್ಷೆ ಬರೆಯಲು ಬಂದಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಇದು ಕ್ಷಣಾರ್ಧದಲ್ಲಿ ಪತ್ತೆ ಹಚ್ಚುತ್ತದೆ.
➤ ಪರೀಕ್ಷಾ ಅಕ್ರಮಗಳನ್ನು ಸಂಪೂರ್ಣವಾಗಿ ತಡೆಯುವುದು ಹಾಗೂ ಒಬ್ಬರ ಬದಲಿಗೆ ಮತ್ತೊಬ್ಬರು ಪರೀಕ್ಷೆ ಬರೆಯುವ (Impersonation) ನಕಲಿ ಅಭ್ಯರ್ಥಿಗಳ ಹಾವಳಿಗೆ ಶಾಶ್ವತ ಬ್ರೇಕ್ ಹಾಕುವುದು ಈ ವ್ಯವಸ್ಥೆಯ ಪ್ರಮುಖ ಉದ್ದೇಶವಾಗಿದೆ.
➤ UPSC ತಂದಿರುವ ಈ ಹೊಸ ನಿಯಮದ ಪ್ರಮುಖ ಮುಖ್ಯಾಂಶಗಳು:
- ಮೇ 24 ರಂದು ನಡೆದ ಯುಪಿಎಸ್‌ಸಿ ಪ್ರಿಲಿಮ್ಸ್ ಪರೀಕ್ಷೆಯ ಒಟ್ಟು 2,072 ಕೇಂದ್ರಗಳಲ್ಲೂ ಈ ಹೊಸ ತಂತ್ರಜ್ಞಾನವನ್ನು ಏಕಕಾಲಕ್ಕೆ ಯಶಸ್ವಿಯಾಗಿ ಬಳಸಲಾಗಿದೆ.
- ಈ ವಿಶೇಷ ಫೇಸ್ ಅಥೆಂಟಿಕೇಶನ್ ವ್ಯವಸ್ಥೆಯನ್ನು UPSC ಸಂಸ್ಥೆಯು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯದ NeGD ತಾಂತ್ರಿಕ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ.
- ಈ ಅತ್ಯಾಧುನಿಕ ಅಪ್ಲಿಕೇಶನ್ ಕೇವಲ 6 ರಿಂದ 8 ಸೆಕೆಂಡುಗಳಲ್ಲಿ ಅಭ್ಯರ್ಥಿಯ ಮುಖವನ್ನು ಗುರುತಿಸಿ ದೃಢೀಕರಿಸುವ ಅದ್ಭುತ ವೇಗವನ್ನು ಹೊಂದಿದೆ.
- ಯಾವುದೇ ದುಬಾರಿ ಸಾಧನಗಳಿಲ್ಲದೆ, ಕೇವಲ ಇನ್ವಿಜಿಲೇಟರ್‌ಗಳ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಮೂಲಕವೇ ಈ ಸಂಪೂರ್ಣ ಪ್ರಕ್ರಿಯೆಯನ್ನು ನಡೆಸಲಾಗಿದೆ.
- ಈ ತಂತ್ರಜ್ಞಾನವು ಪೀಕ್ ಸಮಯದಲ್ಲಿ ಪ್ರತಿ ನಿಮಿಷಕ್ಕೆ 12,000 ರಂತೆ ದೇಶಾದ್ಯಂತ ಒಟ್ಟು 5.5 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳನ್ನು ಯಶಸ್ವಿಯಾಗಿ ಲೈವ್ ವೆರಿಫಿಕೇಶನ್ ಮಾಡಿದೆ.
KAS, PSI, PC, FDA, SDA, RRB, PDO ಸೇರಿದಂತೆ ಇನ್ನಿತರ ಪರೀಕ್ಷೆಗಳ ಹಳೆ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಲು ಇಲ್ಲಿ ಕ್ಲಿಕ್ ಮಾಡಿ