* ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನಾ ಮತ್ತು ತರಬೇತಿ ಮಂಡಳಿಗೆ(ಎನ್ ಸಿಇಆರ್ ಟಿ) 'ಡೀಮ್ಡ್ ವಿಶ್ವವಿದ್ಯಾಲಯ'ದ ಸ್ಥಾನಮಾನ ನೀಡಲಾಗಿದೆ ಎಂದು ಸೆಪ್ಟೆಂಬರ್ 1 ರಂದು ತಿಳಿಸಿದ್ದಾರೆ.
* 'ಎನ್‌ಸಿಇಆರ್‌ಟಿ' 63ನೇ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಧರ್ಮೇಂದ್ರ ಪ್ರಧಾನ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಉನ್ನತ ಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ'ಎನ್ ಸಿಇಆರ್‌ಟಿ' ಹಲವಾರು ಕಾರ್ಯಕ್ರಮಗಳನ್ನು ಕೈಗೊಳ್ಳಲಿದೆ .
* 'ಎನ್ ಸಿಇಆರ್‌ಟಿ' ಪಠ್ಯಕ್ರಮದ ಅಭಿವೃದ್ಧಿ ಬೋಧನೆಯ ಕಲಿಕಾ ಸಾಮಗ್ರಿಗಳ ಅಭಿವೃದ್ಧಿ ಸಂಶೋಧನೆ ಸೇರಿದಂತೆ ವಿವಿಧ ಶೈಕ್ಷಣಿಕ ಚಟುವಟಿಕೆಗಳು ಹಾಗೂ ಕಾರ್ಯಕ್ರಮಗಳನ್ನು ಕೈಗೊಳ್ಳಲಿದೆ .
* 'ಎನ್‌ಸಿಇಆರ್‌ಟಿ'ಗೆ 'ಡೀಮ್ಡ್ ವಿವಿ' ಸ್ಥಾನಮಾನದಿಂದ ಇತರ ವಿಶ್ವವಿದ್ಯಾಲಯಗಳಂತೆಯೇ ಉನ್ನತ ಮಟ್ಟದ ಶೈಕ್ಷಣಿಕ ಮನ್ನಣೆ ಹಾಗೂ 'ಯುಜಿಸಿ'ಯಿಂದ ಹಣಕಾಸು ನೆರವು ದೊರೆಯಲಿದೆ. ಅಲ್ಲದೆ ಎನ್ ಸಿಇಆರ್‌ಟಿಗೆ ಪದವಿ, ಸ್ನಾತಕೋತ್ತರ ಹಾಗೂ ಡಾಕ್ಟರೇಟ್ ಪದವಿ ಕೋರ್ಸ್‌ಗಳನ್ನು ನೀಡಲು ಅವಕಾಶ ದೊರೆತಿದೆ.
'ಎನ್‌ಸಿಇಆರ್‌ಟಿ'ಗೆ ಸ್ಥಾನಮಾನ ನೀಡಿದ 'ಡೀಮ್ಡ್ ವಿಶ್ವವಿದ್ಯಾಲಯ'
Published by Bhagya R K
04 ಸೆಪ್ಟೆಂಬರ್ 2023