* ಗುಣಮಟ್ಟದ ಸೋಲಾರ್ ಫೋಟೋವೋಲ್ಟಾಯಿಕ್ ಕೋಶಗಳು ಮತ್ತು ಮಾಡ್ಯೂಲ್ ಉತ್ಪಾದನೆಗೆ ಹೆಸರಾಗಿರುವ ಬೆಂಗಳೂರಿನ ಎಮ್ವಿ ಎನರ್ಜಿ ಕಂಪನಿಯು ಉತ್ಪಾದನಾ ಘಟಕ ಆರಂಭಿಸಲು 15 ಸಾವಿರ ಕೋಟಿ ರೂ. ಹೂಡಿಕೆ ಮಾಡಲು ನಿರ್ಧರಿಸಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
* ವಿಧಾನಸೌಧದಲ್ಲಿ ಗುರುವಾರ(ಫೆ.20) ನಡೆದ ಸಭೆಯಲ್ಲಿ ಕಂಪನಿಯ ಉನ್ನತ ಪ್ರತಿನಿಧಿಗಳೊಂದಿಗೆ ಹೂಡಿಕೆ ಸಂಬಂಧ ಒಡಂಬಡಿಕೆ ಕಾರ್ಯರೂಪಕ್ಕೆ ಬರುತ್ತಿರುವುದಾಗಿ ಅವರು ಸಂತಸ ವ್ಯಕ್ತಪಡಿಸಿದರು.
* ಎಮ್ವಿ ಎನರ್ಜಿ ಬೆಂಗಳೂರು ಐಟಿಐಆರ್ ವಲಯದಲ್ಲಿ 120 ಎಕರೆ ಜಮೀನು ಕೇಳಿದ್ದು, ಮೊದಲ ಹಂತದಲ್ಲಿ ₹5 ಸಾವಿರ ಕೋಟಿ ಹೂಡಿಕೆ ಮೂಲಕ 5 ಗಿಗಾವ್ಯಾಟ್ ಉತ್ಪಾದನೆ ಮಾಡಲು ಯೋಜನೆ ಹೊಂದಿದೆ. ಈ ಯೋಜನೆ ಒಟ್ಟು 10 ಸಾವಿರ ಉದ್ಯೋಗ ಸೃಷ್ಟಿಸಲಿದೆ ಎಂದು ಸಚಿವ ಎಂ.ಬಿ. ಪಾಟೀಲ್ ಭರವಸೆ ನೀಡಿದರು.
* ಕಂಪನಿಯು ಸೌರವಿದ್ಯುತ್ ಉತ್ಪಾದನೆಗೆ ಅಗತ್ಯವಾದ ಅಲ್ಯೂಮಿನಿಯಂ ಫ್ರೇಮ್, ಗಾಜು, ಇಪಿಇ, ಜೆಬಿ, ರಿಬ್ಬನ್ ಹಾಗೂ ವೇಫರ್ ಉತ್ಪಾದನೆಯಲ್ಲಿ ಪ್ರಸಿದ್ಧವಾಗಿದೆ. ಇದರಿಂದ ಪರಿಸರಸ್ನೇಹಿ ಇಂಧನ ಮತ್ತು ಸುಸ್ಥಿರ ಅಭಿವೃದ್ಧಿ ಸಾಧಿಸಬಹುದು ಎಂದು ತಿಳಿಸಿದ್ದಾರೆ.
* ಸಭೆಯಲ್ಲಿ ಎಮ್ವಿ ಎನರ್ಜಿ ಕಂಪನಿ ನಿರ್ದೇಶಕ ಸುಹಾಸ್ ದೊಂಥಿ, ವಾಣಿಜ್ಯ ವಹಿವಾಟು ವಿಭಾಗದ ಮುಖ್ಯಸ್ಥ ಸುಮಂತ್ ದೊಂಥಿ ಸೇರಿದಂತೆ ಇತರರು ಭಾಗವಹಿಸಿದ್ದರು.
ಎಂಜಿ ಎನರ್ಜಿ ಕಂಪನಿಯಿಂದ 15 ಸಾವಿರ ಕೋಟಿ ಹೂಡಿಕೆ : 10,000 ಉದ್ಯೋಗ ಸೃಷ್ಟಿ!
Published by Jyoti Angadi
22 ಫೆಬ್ರವರಿ 2025