* ದೆಹಲಿಯ ಭಾರತ ಮಂಟಪದಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಇಂಡಿಯಾ ರ‍್ಯಾಂಕಿಂಗ್-2024 ರ ಪಟ್ಟಿಯನ್ನು ಆಗಸ್ಟ್ 12 ರಂದು ಬಿಡುಗಡೆಗೊಳಿಸಿದರು. 
* ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯು (ಐಐಎಸ್‌ಸಿ) ಸತತ 9ನೇ ವರ್ಷವೂ ಅತ್ಯುತ್ತಮ ವಿಶ್ವವಿದ್ಯಾಲಯ ಎಂದು ಕೇಂದ್ರ ಶಿಕ್ಷಣ ಇಲಾಖೆಯು ಬಿಡುಗಡೆ ಗೊಳಿಸಿದ ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಸಮಿತಿ-2024ರ (ಎನ್‌ಐ ಆರ್‌ಎಫ್) ಪಟ್ಟಿಯಲ್ಲಿ ಘೋಷಿಸಲಾಗಿದೆ.
* ದೇಶದ ಟಾಪ್ ಶಿಕ್ಷಣ ಸಂಸ್ಥೆಗಳ ಪಟ್ಟಿಯು ಎನ್‌ಐಆರ್ ಎಫ್‌ನ 9ನೇ ಆವೃತ್ತಿಯಾಗಿದ್ದು, ಅತ್ಯುತ್ತಮ ಹತ್ತು ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸತತ 9ನೇ ವರ್ಷವೂ ಐಐಟಿ ಮದ್ರಾಸ್ ಅಗ್ರಸ್ಥಾನ ಉಳಿಸಿಕೊಂಡಿದೆ. 
* ಬೆಂಗಳೂರಿನ ಐಐಎಸ್‌ಸಿ ಸಮಗ್ರ ವಿಭಾಗದಲ್ಲಿ ಎರಡನೇ ಸ್ಥಾನದಲ್ಲಿದೆ. ಕಳೆದ ಬಾರಿಯೂ ಐಐಎಸ್‌ಸಿ ಎರಡನೇ ಸ್ಥಾನದಲ್ಲಿತ್ತು. ಈ ಬಾರಿ ಒಟ್ಟು 16 ವಿಭಾಗಗಳಲ್ಲಿ ರ‍್ಯಾಂಕಿಂಗ್ ಪ್ರಕಟಿಸಲಾಗಿದೆ. 
* ಐಐಟಿ ಬಾಂಬೆ ಮೂರನೇ ಸ್ಥಾನ ಕಾಯ್ದುಕೊಂಡಿದೆ. ಕಳೆದ ವರ್ಷ ಮೂರನೇ ಸ್ಥಾನದಲ್ಲಿದ್ದ ಐಐಟಿ ದೆಹಲಿ ಸಂಸ್ಥೆಯು ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಮೊದಲ ಹತ್ತು ಸ್ಥಾನಗಳಲ್ಲಿ ಎಂಟು ಐಐಟಿ ಸಂಸ್ಥೆಗಳು ಸ್ಥಾನ ಪಡೆದಿದ್ದು, ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ (ಜೆಎನ್‌ಯು) 10ನೇ ಸ್ಥಾನ ಪಡೆದಿವೆ.
* ದೇಶದ 10 ಅಗ್ರ ಕಾಲೇಜುಗಳಲ್ಲಿ ದೆಹಲಿಯ ಆರು ಕಾಲೇಜುಗಳು ಅಗ್ರಸ್ಥಾನದಲ್ಲಿದ್ದು. ಮಿರಾಂಡಾ ಕಾಲೇಜು ಎರಡನೇ ಸ್ಥಾನಕ್ಕಿಳಿದಿದೆ. ಮೂರನೇ ಸೇಂಟ್ ಸ್ಟಿಫನ್ಸ್‌ ಕಾಲೇಜಿದ್ದು, ಮೂರೂ ಸ್ಥಾನಗಳು ದೆಹಲಿ ಪಾಲಾಗಿವೆ.
* ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಸಮಿತಿಯು (ಎನ್‌ಐಆರ್‌ಎಫ್) ಜುಲೈ 12 ರಂದು (ಸೋಮವಾರ) ಪ್ರಕಟಿಸಿದ ರಾಷ್ಟ್ರೀಯ ಶ್ರೇಯಾಂಕದಲ್ಲಿ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯು (ಜೆಎಸ್ಎಸ್‌- ಎಎಚ್‌ಇಆರ್) 24ನೇ ಸ್ಥಾನಕ್ಕೇರಿದೆ.
* ದೇಶದ ಟಾಪ್ ಶಿಕ್ಷಣ ಸಂಸ್ಥೆಗಳು (ಸಮಗ್ರ ವಿಭಾಗ) :
1. ಐಐಟಿ ಮದ್ರಾಸ್
2. ಐಐಎಸ್‌ಸಿ, ಬೆಂಗಳೂರು
3. ಐಐಟಿ ಬಾಂಬೆ 
4. ಐಐಟಿ ದೆಹಲಿ 
5. ಐಐಟಿ ಕಾನ್ಸುರ್
6. ಐಐಟಿ ಖರಗ್‌ಪುರ್
7. ಏಮ್ಸ್ ದೆಹಲಿ
8. ಐಐಟಿ ರೂರ್ಕಿ
9. ಐಐಟಿ ಗುವಾಹಟಿ
10. ಜೆಎನ್‌ಯು ದೆಹಲಿ