* ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟಡ್ ನ(MRPL) ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಮುಂಡ್ಕೂರು ಶ್ಯಾಮ್ ಪ್ರಸಾದ್ ಕಾಮತ್ ಅವರು 2024 ಫೆಬ್ರುವರಿ 28 ರಂದು ಅಧಿಕಾರ ವಹಿಸಿಕೊಂಡಿದ್ದಾರೆ.
* ಮಣಿಪಾಲದ ಎಂಐಟಿಯಲ್ಲಿ ಕೆಮಿಕಲ್ ಎಂಜಿನಿಯರಿಂಗ್ ಪದವಿ ಪಡೆದಿರುವ ಶ್ಯಾಮ್ ಪ್ರಸಾದ್ ಕಾಮತ್ ಅವರು ಹೈಡ್ರೋಕಾರ್ಬನ್ ಉದ್ಯಮ ಕ್ಷೇತ್ರದಲ್ಲಿ 30 ವರ್ಷಗಳ ಕಾಲ ಅನುಭವ ಹೊಂದಿದ್ದಾರೆ.
* "ನಿರ್ದೇಶಕರ ಮಂಡಳಿಯು ಶ್ರೀ ಸಂಜಯ್ ವರ್ಮಾ ಅವರ ಬದಲಿಗೆ ಕಂಪನಿಗಳ ಕಾಯಿದೆ ಪ್ರಕಾರ 2013 ರ ನಿಬಂಧನೆಗಳಿಗೆ ಅನುಸಾರವಾಗಿ ಮುಂಡ್ಕೂರು ಶ್ಯಾಮಪ್ರಸಾದ್ ಕಾಮತ್ ಅವರನ್ನು ಕಂಪನಿಯ ಮಂಡಳಿಯಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಿಸಲಾಗಿದೆ.
* ಶ್ಯಾಮ್ ಪ್ರಸಾದ್ ಅವರು 1992ರಲ್ಲಿ ಎಂಆರ್ ಪಿಎಲ್ ಸೇರ್ಪಡೆಗೊಂಡರು. ಬಳಿಕ ಗ್ರೂಪ್ ಜನರಲ್( ಟೆಕ್ನಿಕಲ್ ಸರ್ವೀಸಸ್) ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಇವರು ಜೂನ್ 1ರಿಂದ ಕಾರ್ಯ ನಿರ್ವಾಹಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
* ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟಡ್ (MRPL) ವಿಭಾಗದ ಕಾರ್ಯ ನಿರ್ವಾಹಕ ನಿರ್ದೇಶಕರಾಗಿ ನಿರ್ವಹಣೆ, ತಾಂತ್ರಿಕ ಸೇವೆ, ಉತ್ಪಾದನಾ ಯೋಜನೆ ರೂಪಿಸುವಲ್ಲಿ, ಸಂಸ್ಕರಣಾಗಾರದಲ್ಲಿ ಆಧುನಿಕ ತಂತ್ರಜ್ಞಾನ, ಕೃತಕ ಬುದ್ದಿಮತ್ತೆ ಅಳವಡಿಕೆಯಲ್ಲಿ ಕಾಮತ್ ಅವರು ಪ್ರಮುಖ ಪಾತ್ರ ನಿರ್ವಹಿಸಿದ್ದರು ಎಂದು ಎಂಆರ್ ಪಿಎಲ್ ಪ್ರಕಟಿಸಿದೆ.
ಎಂಆರ್ ಪಿಎಲ್ ನ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಮುಂಡ್ಕೂರು ಶ್ಯಾಮ್ ಪ್ರಸಾದ್ ಕಾಮತ್ ಅವರು ನೇಮಕ
Published by Sudha Malagi
01 ಮಾರ್ಚ್ 2024