➤ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ಎರಡು ದಿನಗಳ ಪ್ರಾದೇಶಿಕ ಉನ್ನತ ಮಟ್ಟದ ನೀತಿ ಸಂವಾದ “SAPLING ಪಾಲಿಸಿ ಡೈಲಾಗ್ 2026” ಸಭೆಯಲ್ಲಿ ಈ ಮಹತ್ವದ ಅಂಶಗಳನ್ನು ಚರ್ಚಿಸಲಾಗಿದೆ. ಈ ಕಾರ್ಯಕ್ರಮವನ್ನು ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವ ಚಿರಾಗ್ ಪಾಸ್ವಾನ್ ಅವರು ಉದ್ಘಾಟಿಸಿದರು.
➤ ದಕ್ಷಿಣ ಏಷ್ಯಾದ ಕೃಷಿ ವಲಯದ ಸದ್ಯದ ಚಿತ್ರಣ (ಪ್ರಮುಖ ಅಂಕಿ-ಅಂಶಗಳು):- ಮೌಲ್ಯ ಮತ್ತು ಉದ್ಯೋಗ: ದಕ್ಷಿಣ ಏಷ್ಯಾದ ಕೃಷಿ ವಲಯವು ವಾರ್ಷಿಕವಾಗಿ 700 ಬಿಲಿಯನ್ ಡಾಲರ್‌ಗಿಂತಲೂ (ಸುಮಾರು ₹58 ಲಕ್ಷ ಕೋಟಿಗೂ ಹೆಚ್ಚು) ಹೆಚ್ಚಿನ ಮೌಲ್ಯ ಹೊಂದಿದ್ದು, ಈ ಭಾಗದ ಶೇಕಡಾ 43ರಷ್ಟು ಜನರಿಗೆ ಉದ್ಯೋಗ ನೀಡಿದೆ.
- ಜಿಡಿಪಿ ಕೊಡುಗೆ: ಇಷ್ಟು ದೊಡ್ಡ ಮಟ್ಟದ ಉದ್ಯೋಗ ನೀಡಿದ್ದರೂ, ಒಟ್ಟು ಜಿಡಿಪಿಗೆ (GDP) ಕೃಷಿ ವಲಯದ ಕೊಡುಗೆ ಕೇವಲ ಶೇಕಡಾ 16 ರಷ್ಟು ಮಾತ್ರ ಇದೆ.
- ಆಹಾರ ವ್ಯರ್ಥದ ಆತಂಕ: ಸರಿಯಾದ ಶೇಖರಣಾ ಸೌಲಭ್ಯಗಳಿಲ್ಲದೆ ಪ್ರತಿ ವರ್ಷ ಶೇಕಡಾ 30ಕ್ಕಿಂತ ಹೆಚ್ಚು ಆಹಾರ ವ್ಯರ್ಥವಾಗುತ್ತಿದೆ. ಇದು ಸುಮಾರು 30 ಕೋಟಿ ಜನರಿಗೆ ಸಾಕಾಗುವಷ್ಟು ದೊಡ್ಡ ಪ್ರಮಾಣದ್ದಾಗಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ವಿಶ್ವಬ್ಯಾಂಕ್ ತಜ್ಞರ ಪ್ರಕಾರ, ಮುಂದಿನ ದಿನಗಳಲ್ಲಿ ಕೃಷಿ ವಲಯದ ಪ್ರಗತಿ ಎಂದರೆ ಕೇವಲ "ಉತ್ಪಾದನೆ ಹೆಚ್ಚಿಸುವುದು" ಮಾತ್ರವಲ್ಲ. ಬದಲಿಗೆ ಬೆಳೆದ ಆಹಾರವನ್ನು ಸರಿಯಾಗಿ ಕೌಶಲ್ಯಗೊಳಿಸುವುದು ಮುಖ್ಯವಾಗಿದೆ. ಅದಕ್ಕಾಗಿ ಕೆಳಗಿನ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ:
- ಆಹಾರ ಸಂಸ್ಕರಣೆ (Food Processing): ಕಚ್ಚಾ ಆಹಾರ ಧಾನ್ಯಗಳನ್ನು ಮೌಲ್ಯವರ್ಧಿತ ಉತ್ಪನ್ನಗಳಾಗಿ ಮಾರ್ಪಡಿಸುವುದು.
- ಕೋಲ್ಡ್ ಸ್ಟೋರೇಜ್ ಮತ್ತು ಲಾಜಿಸ್ಟಿಕ್ಸ್: ಹಣ್ಣು, ತರಕಾರಿ ಹಾಗೂ ಧಾನ್ಯಗಳು ಹಾಳಾಗದಂತೆ ಶೇಖರಿಸಲು ಶೀತಲೀಕರಣ ಗೋದಾಮುಗಳ ನಿರ್ಮಾಣ.
- ಸುಧಾರಿತ ಮಾರುಕಟ್ಟೆ ವ್ಯವಸ್ಥೆ: ರೈತರಿಗೆ ನೇರವಾಗಿ ಜಾಗತಿಕ ಮಾರುಕಟ್ಟೆಯ ಸಂಪರ್ಕ ಕಲ್ಪಿಸುವುದು.
- ಸಾಧನೆಯ ಕ್ಷೇತ್ರ: ಅಂದಿನ ಸ್ಥಿತಿ (1950-51) : ಇಂದಿನ ಸ್ಥಿತಿ (ಪ್ರಸ್ತುತ)
- ಒಟ್ಟು ಆಹಾರ ಧಾನ್ಯ ಉತ್ಪಾದನೆ: 51 ಮಿಲಿಯನ್ ಟನ್ : 330 ಮಿಲಿಯನ್ ಟನ್ಗಿಂತಲೂ ಹೆಚ್ಚು
- ಸಂಸ್ಕರಿಸಿದ ಆಹಾರ ರಫ್ತು (ಕಳೆದ ದಶಕ): 4.9 ಬಿಲಿಯನ್ ಡಾಲರ್ : 10 ಬಿಲಿಯನ್ ಡಾಲರ್ಗೆ ಏರಿಕೆ (ಡಬಲ್)
ಇನ್ನು ಹೆಚ್ಚಿನ ಪ್ರಚಲಿತ ಘಟನೆಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ