* ದೆಹಲಿ ಡೇರ್‌ಡೆವಿಲ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಐಪಿಎಲ್‌ನಲ್ಲಿ ಆಡಿದ 34 ವರ್ಷದ ಪಂಜಾಬ್ ವೇಗಿ ಸಿದ್ದಾರ್ಥ್ ಕೌಲ್ ಅವರು ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.
* 2018 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಸಿದ್ಧಾರ್ಥ್, 3 ಏಕದಿನ ಮತ್ತು 3 ಟಿ20 ಪಂದ್ಯಗಳನ್ನು ಆಡಿದ್ದಾರೆ. ಐಪಿಎಲ್‌ನಲ್ಲೂ ಉತ್ತಮ ಪ್ರದರ್ಶನ ನೀಡಿದ್ದ ಅವರು 55 ಪಂದ್ಯಗಳಲ್ಲಿ 58 ವಿಕೆಟ್‌ಗಳನ್ನು ಪಡೆದಿದ್ದಾರೆ.
* 2019ರಲ್ಲಿ ಟೀಂ ಇಂಡಿಯಾ ಪರ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದ ಸಿದ್ಧಾರ್ಥ್, ಅಂದಿನಿಂದ ಭಾರತ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ.
* ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ಹಂಚಿಕೊಳ್ಳುವ ಮೂಲಕ ಸಿದ್ಧಾರ್ಥ್ ಕೌಲ್ ನಿವೃತ್ತಿ ಘೋಷಿಸಿದ್ದಾರೆ. ಸಿದ್ಧಾರ್ಥ್ ಟೀಂ ಇಂಡಿಯಾ ಪರ 3 ಏಕದಿನ ಮತ್ತು 3 ಟಿ20 ಪಂದ್ಯಗಳನ್ನು ಆಡಿದ್ದು, ಅವರು ಐಪಿಎಲ್‌ನಲ್ಲೂ ಆಡಿದ್ದಾರೆ.
* ‘ನಾನು ಬಾಲ್ಯದಲ್ಲಿ ಮತ್ತು ಪಂಜಾಬ್‌ನ ಮೈದಾನಗಳಲ್ಲಿ ಕ್ರಿಕೆಟ್ ಆಡುತ್ತಿದ್ದಾಗ ದೇಶವನ್ನು ಪ್ರತಿನಿಧಿಸುವ ಕನಸು ಕಂಡಿದ್ದೆ. ದೇವರ ದಯೆಯಿಂದ ಆ ಕನಸು 2018 ರಲ್ಲಿ ನನಸಾಯಿತು ಎಂದು ಹಂಚಿಕೊಂಡಿದ್ದಾರೆ.
* ಟಿ20 ತಂಡದಲ್ಲಿ ನನ್ನ ಕ್ಯಾಪ್ ಸಂಖ್ಯೆ 75 ಮತ್ತು ಏಕದಿನ ತಂಡದಲ್ಲಿ ನನ್ನ ಕ್ಯಾಪ್ ಸಂಖ್ಯೆ 221 ಆಗಿತ್ತು. ಈಗ ನಾನು ಭಾರತದಲ್ಲಿ ನನ್ನ ವೃತ್ತಿಜೀವನವನ್ನು ಕೊನೆಗೊಳಿಸುವ ಮತ್ತು ನನ್ನ ನಿವೃತ್ತಿಯನ್ನು ಘೋಷಿಸುವ ಸಮಯ ಬಂದಿದೆ ಎಂದು ಬರೆದುಕೊಂಡಿದ್ದಾರೆ.
* ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ 2008 ರಲ್ಲಿ ಅಂಡರ್-19 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. ಆಗ ಸಿದ್ಧಾರ್ಥ್ ಕೌಲ್ ಕೂಡ ಆ ತಂಡದ ಭಾಗವಾಗಿದ್ದರು. ಇದಲ್ಲದೇ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಸಿದ್ಧಾರ್ಥ್ ಕೌಲ್ ಸೀನಿಯರ್ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಇತ್ತೀಚೆಗೆ ಅವರು ರಣಜಿ ಟ್ರೋಫಿಯಲ್ಲೂ ಆಡಿದ್ದರು.
ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಸಿದ್ಧಾರ್ಥ್ ಕೌಲ್
Published by Akshata Halli
30 ನವೆಂಬರ್ 2024