* ಭಾರತೀಯ ಕ್ರಿಕೆಟ್ ತಂಡದ ಹಿರಿಯ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ಗುರುವಾರ (ಆಗಸ್ಟ್ 04)ಎಲ್ಲ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. ಆ ಮೂಲಕ, ತಮ್ಮ25 ವರ್ಷಗಳ ಅಂತರರಾಷ್ಟ್ರೀಯ, ದೇಶೀಯ ಮತ್ತು ಫ್ರಾಂಚೈಸಿ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ.
* 42 ವರ್ಷದ ಮಿಶ್ರಾ ಅವರು ಭಾರತ ಪರ 22 ಟೆಸ್ಟ್, 36 ಏಕದಿನ, 10 ಟಿ20 ಪಂದ್ಯಗಳಲ್ಲಿ ಆಡಿದ್ದು, ಒಟ್ಟು 156 ಅಂತರರಾಷ್ಟ್ರೀಯ ವಿಕೆಟ್‌ಗಳನ್ನು ಪಡೆದಿದ್ದಾರೆ.
* 2013ರಲ್ಲಿ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ 18 ವಿಕೆಟ್ ಪಡೆದು ಜಾವಗಲ್ ಶ್ರೀನಾಥ್ ಅವರ ದಾಖಲೆಯನ್ನು ಸಮನಾಗಿಸಿದ್ದರು.
* ಐಪಿಎಲ್‌ನಲ್ಲಿ ಮಿಶ್ರಾ 162 ಪಂದ್ಯಗಳಲ್ಲಿ 174 ವಿಕೆಟ್ ಪಡೆದಿದ್ದು, ಏಳನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.
* ಅಮಿತ್ ಮಿಶ್ರಾ, 2008ರಲ್ಲಿ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು. 2013ರಲ್ಲಿ ಜಿಂಬಾಬ್ವೆ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 18 ವಿಕೆಟ್‌ಗಳನ್ನು ಪಡೆಯುವ ಮೂಲಕ ಜಾವಗಲ್ ಶ್ರೀನಾಥ್ ಅವರ ದಾಖಲೆಯನ್ನು ಸರಿಗಟ್ಟಿದ್ದರು.
* 2008 ರಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್, 2011 ರಲ್ಲಿ ಪಂಜಾಬ್ ಮತ್ತು 2013 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಮೂರು ಐಪಿಎಲ್ ಹ್ಯಾಟ್ರಿಕ್ ವಿಕೆಟ್ ಪಡೆದ ಏಕೈಕ ಬೌಲರ್ ಆಗಿದ್ದಾರೆ.
* ಭಾರತ ತಂಡದ ಪರವಾಗಿ ಕೊನೆಯದಾಗಿ 2017ರಲ್ಲಿ ಆಟವಾಡಿದ್ದ 42 ವರ್ಷದ ಹರ್ಯಾಣ ಕ್ರಿಕೆಟಿಗ ಅಮಿತ್ ಮಿಶ್ರಾ, ನಂತರ 2024ರ ಐಪಿಎಲ್ ಆವೃತ್ತಿವರೆಗೂ ಕ್ರಿಕೆಟ್ ನಲ್ಲಿ ಕಾಣಿಸಿಕೊಂಡಿದ್ದರು.
* ತಮ್ಮ ನಿವೃತ್ತಿಯನ್ನು ದೃಢಪಡಿಸಿರುವ ಅಮಿತ್ ಮಿಶ್ರಾ, “ನಾನು ನಿವೃತ್ತಿಯಾಗಲು ನಿರ್ಧರಿಸಿದ್ದೇನೆ” ಎಂದು PTI ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
* ನಿವೃತ್ತಿ ಘೋಷಣೆಯ ವೇಳೆ, ತಮ್ಮ ಸಹ ಆಟಗಾರರು, ಬಿಸಿಸಿಐ, ಹರಿಯಾಣ ಕ್ರಿಕೆಟ್ ಸಂಸ್ಥೆ, ಕುಟುಂಬ ಮತ್ತು ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಕ್ರಿಕೆಟ್ ತಮಗೆ ಅನೇಕ ನೆನಪುಗಳು ಮತ್ತು ಅಮೂಲ್ಯ ಪಾಠಗಳನ್ನು ನೀಡಿದೆಯೆಂದು ಅವರು ಭಾವನಾತ್ಮಕವಾಗಿ ತಿಳಿಸಿದ್ದಾರೆ.
ಶುಕ್ರವಾರ, 05 ಸೆಪ್ಟೆಂಬರ್ 2025
12:25 ಅಪರಾಹ್ನ
Daily PDF
ಎಲ್ಲಾ ಮಾದರಿಯ ಕ್ರಿಕೆಟ್ಗೆ ಲೆಗ್ ಸ್ಪಿನ್ನರ್ 'ಅಮಿತ್ ಮಿಶ್ರಾ' ವಿದಾಯ
Authored by:
Jyoti Angadi