* ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ತನ್ನ ಸೇವೆಗಳನ್ನ ಇನ್ನೂ ಹೆಚ್ಚು ಜನರಿಗೆ ತಲುಪಿಸಲು ಮತ್ತು ಆಧುನಿಕ ತಂತ್ರಜ್ಞಾನ ಬಳಸಿ ಸುಲಭಗೊಳಿಸಲು "ಒನ್ ಮ್ಯಾನ್ ಆಫಿಸ್" ಎಂಬ ಹೊಸ ಮೊಬೈಲ್ ಅಪ್ಲಿಕೇಶನ್ ಸೇವೆಯನ್ನು ಪ್ರಾರಂಭಿಸಿದೆ.
* ಎಲ್ಐಸಿ ತನ್ನ ಏಜೆಂಟರು ಮತ್ತು ಮಾರಾಟ ತಂಡಕ್ಕಾಗಿ 'ಒನ್ ಮ್ಯಾನ್ ಆಫೀಸ್' (ಒಎಂಒ) ಡಿಜಿಟಲ್ ಸೌಲಭ್ಯವನ್ನು ಪ್ರಾರಂಭಿಸಿತು, ಇದು ಅವರ ಮೊಬೈಲ್ ಫೋನ್‌ಗಳಿಂದಲೇ ಎಲ್ಲಾ ವಿಮಾ ಸೇವೆಗಳನ್ನು ಒದಗಿಸಲು ಅನುವು ಮಾಡಿಕೊಡುತ್ತದೆ.
* ಎಲ್‌ಐಸಿ ಸಿಇಒ ಮತ್ತು ಎಂಡಿ ಸಿದ್ಧಾರ್ಥ ಮೊಹಾಂತಿ ಅವರು ಇದನ್ನು '2047 ರ ವೇಳೆಗೆ ಎಲ್ಲರಿಗೂ ವಿಮೆ' ಮಿಷನ್ ಅನ್ನು ಬಲಪಡಿಸುವ ಮತ್ತು ಗ್ರಾಹಕರಿಗೆ ಉತ್ತಮ ಸೇವೆಗಳನ್ನು ಒದಗಿಸುವ ಗೇಮ್ ಚೇಂಜರ್ ಎಂದು ಕರೆದರು.
* ಒಎಮ್‌ಒ ( ಒನ್ ಮ್ಯಾನ್ ಆಫೀಸ್) ಸೇವೆಯನ್ನು ಎಲ್‌ಐಸಿ ಮೊಬೈಲ್ ಡಿಜಿಟಲ್ ಆಫೀಸ್ ಎಂದು ವಿಶ್ಲೇಶಿಸಿದ್ದು ಮೊಬೈಲ್ ಫೋನ್ ಮೂಲಕ ಎಲ್‌ಐಸಿಯ ಎಲ್ಲಾ ಸೇವೆಯನ್ನು ಪಡೆಯಲು ಏಕ ವೇದಿಕೆಯಾಗಿ ಕಾರ್ಯ ನಿರ್ವಹಿಸಲಿದೆ.
* ಈ ಸೇವೆ ಎಲ್‌ಐಸಿಯ ಆನಂದ (ಆತ್ಮ ನಿರ್ಭರ ಏಜೆಂಟ್ಸ್ ನ್ಯೂ ಬುಸಿನೆಸ್ ಡಿಜಿಟಲ್ ಆಪ್ಲಿಕೇಶನ್) ಆಧರಿಸಿ ರಚಿಸಲಾಗಿದ್ದು, ಇದು ಏಜೆಂಟ್‌ಗಳಿಗೆ ಹೊಸ ಗ್ರಾಹಕರನ್ನು ಪಡೆಯಲು ನೆರವಾಗಲಿದೆ. ಜತೆಗೆ ಯೋಜನೆಗಳ ಪ್ರೀಮಿಯಂ ಲೆಕ್ಕಚಾರ, ಸೇವೆಯ ಲಾಭಗಳ ಮಾಹಿತಿ, ಇ-ಎನ್‌ಎಸಿಹೆಚ್ ನೋಂದಣಿ, ವಿಳಾಸ ಬದಲಾಯಿಸುವ ಸೌಲಭ್ಯ, ಆನ್‌ಲೈನ್ ಸಾಲ ಅರ್ಜಿ, ಪ್ರೀಮಿಯಂ ಪಾವತಿ ರಿನಿವಲ್, ಹಾಗೂ ಕಾಗದ ಪತ್ರಗಳನ್ನು ಸಲ್ಲಿಸುವ ಅವಕಾಶ ಸೇರಿ ಹಲವು ಸೌಲಭ್ಯವನ್ನು ಇಲ್ಲಿ ಪಡೆಯಬಹುದಾಗಿದೆ.
ಎಲ್ಐಸಿ ತನ್ನ ಏಜೆಂಟರು ಮತ್ತು ಮಾರಾಟ ತಂಡಕ್ಕಾಗಿ 'ಒನ್ ಮ್ಯಾನ್ ಆಫೀಸ್' (ಒಎಂಒ) ಡಿಜಿಟಲ್ ಸೌಲಭ್ಯ ಪ್ರಾರಂಭ
Published by Bhagya R K
26 ಫೆಬ್ರವರಿ 2025