* ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಸ್ಥಾನಕ್ಕೆ ಸತ್ ಪಾಲ್ ಭಾನೂ ಅವರನ್ನು ತಾತ್ಕಾಲಿಕವಾಗಿ ನೇಮಿಸಲಾಗಿದೆ.
* ಇದಕ್ಕೂ ಮೊದಲು ಈ ಹುದ್ದೆಯನ್ನು ವಹಿಸಿಕೊಂಡಿದ್ದ ಸಿದ್ಧಾರ್ಥ ಮೊಹಂತಿ ಅವರ ಅಧಿಕಾರಾವಧಿ ಜೂನ್ 7ರಂದು ಕೊನೆಗೊಂಡಿತು.
* 1985ರಲ್ಲಿ ಎಲ್‌ಐಸಿಗೆ ಸೇರಿದ ಮೊಹಂತಿಯವರ ನಿವೃತ್ತಿಯಿಂದ ಈ ಸ್ಥಾನ ಖಾಲಿಯಾಯಿತು, ಮತ್ತು ಹಣಕಾಸು ಸೇವೆಗಳ ಇಲಾಖೆ ಭಾನೂ ಅವರನ್ನು ಈ ಹುದ್ದೆಗೆ ಆಯ್ಕೆ ಮಾಡಿದೆ.
* ಎಲ್‌ಐಸಿಯ ನಾಲ್ಕು ವ್ಯವಸ್ಥಾಪಕ ನಿರ್ದೇಶಕರಲ್ಲಿ ಭಾನೂ ಹಿರಿಯರಾಗಿದ್ದು, ಅವರ ಅಧಿಕಾರಿ ಅವಧಿ ಸೆಪ್ಟೆಂಬರ್ 7ರವರೆಗೆ ಅಥವಾ ಹೊಸ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ನೇಮಕವಾಗುವವರೆಗೆ ಮುಂದುವರೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಎಲ್‌ಐಸಿ ಸಿಇಒ ಹುದ್ದೆಗೆ ಸತ್ ಪಾಲ್ ಭಾನೂ ತಾತ್ಕಾಲಿಕ ನೇಮಕ
Published by Jyoti Angadi
09 ಜೂನ್ 2025