* ಶ್ರೀಲಂಕಾದ ಶಮ್ಮಿ ಸಿಲ್ವಾ ಅವರು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷರಾದರು. ಇತ್ತೀಚೆಗಷ್ಟೇ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿದ್ದ ಭಾರತದ ಜಯ್ ಶಾ ಅವರ ನಂತರ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.
* ಮೂರು ಬಾರಿ ಎಸಿಸಿ ಅಧ್ಯಕ್ಷರಾಗಿದ್ದ ಜಯ್ ಶಾ ಅವರ ಅವಧಿ ಮುಗಿದಿದ್ದು, ಶಮ್ಮಿ ಸಿಲ್ವಾ ಅವರು ಈ ಹಿಂದೆ ಸಂಸ್ಥೆಯ ಹಣಕಾಸು ಮತ್ತು ಮಾರುಕಟ್ಟೆ ಸಮಿತಿಯ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದರು.
* “ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅನ್ನು ಮುನ್ನಡೆಸುವುದು ದೊಡ್ಡ ಗೌರವ. ಕ್ರಿಕೆಟ್ ಏಷ್ಯಾದ ಹೃದಯ ಬಡಿತವಾಗಿದೆ, ಮತ್ತು ಆಟವನ್ನು ಉನ್ನತೀಕರಿಸಲು, ಉದಯೋನ್ಮುಖ ಪ್ರತಿಭೆಗಳಿಗೆ ಅವಕಾಶಗಳನ್ನು ಒದಗಿಸಲು ಮತ್ತು ಈ ಸುಂದರ ಕ್ರೀಡೆಯ ಮೂಲಕ ನಮ್ಮನ್ನು ಒಂದುಗೂಡಿಸುವ ಬಾಂಧವ್ಯವನ್ನು ಬಲಪಡಿಸಲು ಎಲ್ಲಾ ಸದಸ್ಯ ರಾಷ್ಟ್ರಗಳೊಂದಿಗೆ ನಿಕಟವಾಗಿ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ ಎಂದು ಸಿಲ್ವಾ ಅವರು ತಿಳಿಸಿದ್ದಾರೆ.
ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷರಾಗಿ ಶಮ್ಮಿ ಸಿಲ್ವಾ ನೇಮಕ
Published by Bhagya R K
09 ಡಿಸೆಂಬರ್ 2024