* ಅನುಭವಿ ಮಿಡ್‌ಫೀಲ್ಡರ್ ಸಲಿಮಾ ಟೆಟೆ ಅವರನ್ನು ಏಷ್ಯಾ ಕಪ್ ಹಾಕಿ ಟೂರ್ನಿಯಲ್ಲೂ ಭಾರತ ಮಹಿಳಾ ತಂಡದ ನಾಯಕಿಯನ್ನಾಗಿ ಮುಂದುವರಿಸಲಾಗಿದೆ. ಸೆಪ್ಟೆಂಬರ್ 5ರಿಂದ 14ರವರೆಗೆ ಚೀನಾದ ಹಾಂಗ್‌ಝೌನಲ್ಲಿ ಟೂರ್ನಿ ನಡೆಯಲಿದೆ.
* ಈ ಸ್ಪರ್ಧೆಯಲ್ಲಿ ಚಾಂಪಿಯನ್ ಆಗುವ ತಂಡ ಮುಂದಿನ ಎಫ್‌ಐಎಚ್ ಮಹಿಳಾ ಹಾಕಿ ವಿಶ್ವಕಪ್‌ಗೆ ಅರ್ಹತೆ ಪಡೆಯಲಿದೆ.
* ಭಾರತ ‘ಬಿ’ ಗುಂಪಿನಲ್ಲಿ ಜಪಾನ್, ಥಾಯ್ಲೆಂಡ್ ಮತ್ತು ಸಿಂಗಪುರ ವಿರುದ್ಧ ಆಡಲಿದೆ. ಮೊದಲ ಪಂದ್ಯ ಸೆ. 5ರಂದು ಥಾಯ್ಲೆಂಡ್ ವಿರುದ್ಧ ನಡೆಯಲಿದೆ.
* ಮುಖ್ಯ ಕೋಚ್ ಹರೇಂದ್ರ ಸಿಂಗ್ ಪ್ರಕಾರ, ತಂಡದಲ್ಲಿ ಅನುಭವಿಗಳ ಜೊತೆಗೆ ಯುವ ಆಟಗಾರ್ತಿಯರು ಕೂಡಿದ್ದು ಉತ್ತಮ ಸಮತೋಲನ ಹೊಂದಿದೆ.
* 23 ವರ್ಷದ ಸಲಿಮಾ ಅವರನ್ನು ಕಳೆದ ವರ್ಷ ಮೊದಲ ಬಾರಿಗೆ ನಾಯಕಿಯನ್ನಾಗಿ ಆಯ್ಕೆ ಮಾಡಲಾಗಿತ್ತು.
* 20 ಮಂದಿಯ ತಂಡದಲ್ಲಿ ಬನ್ಸಾರಿ ಸೋಲಂಕಿ, ಬಿಚು ದೇವಿ (ಗೋಲ್‌ಕೀಪರ್ಸ್), ಮನಿಶಾ ಚೌಹಾನ್, ಉದಿತಾ, ಜ್ಯೋತಿ, ನಿಕ್ಕಿ ಪ್ರಧಾನ್ (ಡಿಫೆಂಡರ್ಸ್), ನೇಹಾ, ಲಾಲ್ರೆಮ್‌ಸಿಯಾಮಿ, ಸುನೆಲಿಟಾ (ಮಿಡ್‌ಫೀಲ್ಡರ್ಸ್), ನವನೀತ್ ಕೌರ್, ದೀಪಿಕಾ, ಸಂಗೀತಾ ಕುಮಾರಿ ಸೇರಿದಂತೆ ಪ್ರಮುಖ ಆಟಗಾರ್ತಿಯರು ಸೇರಿದ್ದಾರೆ.
ಶುಕ್ರವಾರ, 22 ಆಗಸ್ಟ್ 2025
11:58 ಪೂರ್ವಾಹ್ನ
Daily PDF
ಏಷ್ಯಾ ಕಪ್ ಹಾಕಿಯಲ್ಲಿ ಭಾರತ ಮಹಿಳಾ ತಂಡದ ನಾಯಕಿಯಾಗಿ ಸಲಿಮಾ ಟೆಟೆ ಮುಂದುವರಿಕೆ
Authored by:
Jyoti Angadi