➤ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಜಿಎಸ್ಎಲ್‌ವಿ-ಎಫ್17 (GSLV-F17) ರಾಕೆಟ್ ಮೂಲಕ ಇಒಎಸ್-05 (EOS-05) ಭೂ ವೀಕ್ಷಣಾ ಉಪಗ್ರಹವನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ.
- ಉಡಾವಣಾ ವಾಹನ: GSLV-F17 (19ನೇ ಜಿಎಸ್ಎಲ್‌ವಿ ಪಯಣ)
- ಉಪಗ್ರಹದ ತೂಕ: 2,367 ಕೆಜಿ (ಜಿಎಸ್ಎಲ್‌ವಿ ಹೊತ್ತೊಯ್ದ ಅತ್ಯಂತ ಭಾರದ ಉಪಗ್ರಹ)
- ಕಾರ್ಯಾಚರಣೆ ಅವಧಿ: ಕನಿಷ್ಠ 7 ರಿಂದ 9 ವರ್ಷಗಳು
- ಹಳೆಯ ಹೆಸರು: ಜಿಸ್ಯಾಟ್-1ಎ (GISAT-1A)
➤ ಉಪಗ್ರಹದ ಮುಖ್ಯ ಉಪಯೋಗಗಳು:
- ಹವಾಮಾನ ಮುನ್ಸೂಚನೆ: ನೈಜ-ಸಮಯದಲ್ಲಿ ಹವಾಮಾನ ಬದಲಾವಣೆಗಳನ್ನು ಪತ್ತೆಹಚ್ಚುವುದು.
- ವಿಪತ್ತು ನಿರ್ವಹಣೆ: ಚಂಡಮಾರುತ, ಪ್ರವಾಹ ಹಾಗೂ ಕಾಡ್ಗಿಚ್ಚಿನಂತಹ ನೈಸರ್ಗಿಕ ವಿಕೋಪಗಳನ್ನು ತ್ವರಿತವಾಗಿ ಮೇಲ್ವಿಚಾರಣೆ ಮಾಡುವುದು.
- ಕೃಷಿ ಮತ್ತು ಅರಣ್ಯ: ಬೆಳೆಗಳ ಆರೋಗ್ಯ, ಜಲಮೂಲಗಳು ಮತ್ತು ಅರಣ್ಯ ಪ್ರದೇಶಗಳ ನಿರಂತರ ಪರಿಶೀಲನೆ.
- ಆಯಕಟ್ಟಿನ ದತ್ತಾಂಶ: ಭೂಮಿಯಿಂದ ಸುಮಾರು 36,000 ಕಿ.ಮೀ ಎತ್ತರದಿಂದ ಭಾರತೀಯ ಭೂಭಾಗದ ಮೇಲೆ ನಿರಂತರ ನಿಗಾ (Eye in the Sky).
➤ ಇದು ಭೂಸ್ಥಿರ ಕಕ್ಷೆಯಿಂದ (Geosynchronous Orbit) ಭಾರತದ ಭೂಭಾಗವನ್ನು ನಿರಂತರವಾಗಿ ವೀಕ್ಷಿಸುವ ದೇಶದ ಮೊದಲ ಅತ್ಯಾಧುನಿಕ ಜಿಯೋ-ಇಮೇಜಿಂಗ್ ಉಪಗ್ರಹವಾಗಿದೆ. ಇದು ಪ್ರತಿ ಅರ್ಧ ಗಂಟೆಗೊಮ್ಮೆ ಚಿತ್ರಗಳನ್ನು ರವಾನಿಸುವ ಸಾಮರ್ಥ್ಯ ಹೊಂದಿದೆ.
ಶುಕ್ರವಾರ, 04 ಸೆಪ್ಟೆಂಬರ್ 2026
10:39 ಪೂರ್ವಾಹ್ನ
Daily PDF
ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋ ಮತ್ತೊಂದು ಮೈಲಿಗಲ್ಲು: ಭೂ ವೀಕ್ಷಣಾ ಉಪಗ್ರಹ 'ಇಒಎಸ್-05' ಯಶಸ್ವಿ ಉಡಾವಣೆ!
Authored by:
Akshata Halli