* 2014-15 ಭಾರತೀಯರ ತಲಾದಾಯ 86,647 ರೂ. ಇತ್ತು. ಈಗ 1,72,000 ರೂ. ಗೆ ಏರಿಕೆಯಾಗಿದ್ದು ಒಟ್ಟು ಶೇ.99ರಷ್ಟು ಹೆಚ್ಚಳ ಕಂಡುಬಂದಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಸಂಸ್ಥೆಯ ಅಂಕಿ-ಅಂಶಗಳು ತಿಳಿಸಿವೆ.
* ಇದು ಪ್ರಸ್ತುತ ಬೆಲೆಯನ್ನು ಆಧರಿಸಿದ ತಲಾ ಆದಾಯವಾಗಿದ್ದು, ತಲಾದಾಯ ಹೆಚ್ಚಳ ಬಹುತೇಕ ಪ್ರಮಾಣದಲ್ಲಿ ಶೇ.10 ರಷ್ಟು ಜನಸಂಖ್ಯೆಗೆ ಮಾತ್ರ ಆಗಿದೆ. ಸಾಂಖ್ಯಿಕ ಸಂಸ್ಥೆಯ ದಾಖಲೆಗಳ ಪ್ರಕಾರ, ಕೋವಿಡ್ ಸಂದರ್ಭದಲ್ಲಿ ಪ್ರಸ್ತುತ ಹಾಗೂ ನೈಜ ತಲಾದಾಯ ಎರಡೂ ಕುಸಿತ ಕಂಡಿದ್ದವು. ನಂತರದ ವರ್ಷಗಳಲ್ಲಿ ಅವರೆಡರಲ್ಲೂ ಹೆಚ್ಚಳ ಕಂಡುಬಂದಿದೆ.
* ವರ್ಲ್ಡ್ ಡೆವಲಪ್ಮೆಂಟ್ ಇಂಡಿಕೇಟರ್ ಡೇಟಾಬೇಸ್ ಪ್ರಕಾರ, 2014 ರಿಂದ 2019 ರವರೆಗಿನ ಅವಧಿಯಲ್ಲಿ ನೈಜ ಅವಧಿಯಲ್ಲಿ ಭಾರತದ ತಲಾ ಆದಾಯದ ಸರಾಸರಿ ಬೆಳವಣಿಗೆಯು ವಾರ್ಷಿಕ 5.6% ಎಂದು ಪ್ರಧಾನ ಆರ್ಥಿಕ ಸಂಶೋಧನಾ ಸಂಸ್ಥೆಯ NIPFP ನ ಮಾಜಿ ನಿರ್ದೇಶಕ ಪಿನಾಕಿ ಚಕ್ರವರ್ತಿ PTI ಗೆ ತಿಳಿಸಿದ್ದಾರೆ.
* "ಈ ಬೆಳವಣಿಗೆ ಗಮನಾರ್ಹವಾಗಿದ್ದು, ಆರೋಗ್ಯ, ಶಿಕ್ಷಣ ಮತ್ತು ಆರ್ಥಿಕ ಮತ್ತು ಸಾಮಾಜಿಕ ಚಲನಶೀಲತೆಗೆ ಸಂಬಂಧಿಸಿದ ಫಲಿತಾಂಶಗಳಲ್ಲಿ ನಾವು ಸುಧಾರಣೆಗಳನ್ನು ಕಂಡಿದ್ದೇವೆ. ಕೋವಿಡ್ ನಮ್ಮ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಆದಾಗ್ಯೂ, ಕೋವಿಡ್ ನಂತರ ನಾವು ಗಮನಾರ್ಹ ಆರ್ಥಿಕ ಚೇತರಿಕೆ ಕಂಡಿದ್ದೇವೆ." ಎಂದು ಹೇಳಲಾಗಿದೆ.
ದುಪ್ಪಟ್ಟಾದ ಭಾರತದ ತಲಾ ಆದಾಯ
Published by Tajabi Pathan
05 ಮಾರ್ಚ್ 2023