* ಗೋವಿಂದರಾಜು (ರಾಜಶೇಖರ್) ನಿರ್ಮಾಣ ಮಾಡಿ ಬರಗೂರು ರಾಮಚಂದ್ರಪ್ಪ ನಿರ್ದೇಶಿಸಿರುವ 'ಚಿಣ್ಣರ ಚಂದ್ರ' ಸಿನಿಮಾವು ದುಬೈ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಉತ್ತಮ 'ಮಕ್ಕಳ ಚಿತ್ರ ಪ್ರಶಸ್ತಿ'ಗೆ ಭಾಜನವಾಗಿದೆ.
* ಬರಗೂರು ರಾಮಚಂದ್ರಪ್ಪ ಅವರ 'ಅಡಗೂಲಜ್ಜಿ' ಕಾದಂಬರಿ ಆಧಾರಿತ ಸಿನಿಮಾ 'ಚಿಣ್ಣರ ಚಂದ್ರ' ಸಿನಿಮಾಗೆ ದುಬೈ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಎರಡು ಪ್ರಶಸ್ತಿಗಳು ಲಭಿಸಿವೆ. 'ಚಿಣ್ಣರ ಚಂದ್ರ' ಚಿತ್ರಕ್ಕೆ 'ಉತ್ತಮ ಮಕ್ಕಳ ಚಿತ್ರ' ಪ್ರಶಸ್ತಿ ಲಭಿಸಿದೆ.
* ಆಕ್ಷಾಂಕ್ಷ್ ಬರಗೂರ್ ಅವರು (ಬರಗೂರರ ಮೊಮ್ಮಗ) ಈ ಚಿತ್ರದಲ್ಲಿ ಪ್ರಮುಖ ಪ್ರಾತ್ರಧಾರಿಯಾಗಿದ್ದು, ದುಬೈ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಉತ್ತಮ ಬಾಲನಟ ಪ್ರಶಸ್ತಿ ಲಭ್ಯವಾಗಿದೆ.
* ಆಕಾಂಕ್ಷ್ ಬರಗೂರು ಅವರು ಈ ಮೊದಲು ಕನ್ನಡದ ಭಾಗೀರಥಿ, ತಾಯಿ ಕಸ್ತೂರ್ ಗಾಂಧಿ, ಬಯಲಾಟದ ಭೀಮಣ್ಣ ಚಿತ್ರಗಳಲ್ಲಿ ಅಭಿನಯಿಸಿ ಗಮನ ಸೆಳೆದಿದ್ದಾನೆ. ಇದೀಗ ಚಿಣ್ಣರ ಚಂದ್ರ ಮೂಲಕ ಪ್ರಶಸ್ತಿ ಪಡೆದಿದ್ದಾನೆ.
* ‘ಚಿಣ್ಣರ ಚಂದ್ರ’ ಚಿತ್ರವು ಬರಗೂರರ ‘ಅಡಗೊಲಜ್ಜಿ’ ಎಂಬ ಕಾದಂಬರಿಯನ್ನು ಆಧರಿಸಿದೆ. ಬರಗೂರು ರಾಮಚಂದ್ರಪ್ಪ ಅವರು ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ.
ಗುರುವಾರ, 29 ಫೆಬ್ರುವರಿ 2024
11:05 ಪೂರ್ವಾಹ್ನ
Daily PDF
ದುಬೈ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ "ಚಿಣ್ಣರ ಚಂದ್ರ" ಚಿತ್ರಕ್ಕೆ ಉತ್ತಮ ಮಕ್ಕಳ ಚಿತ್ರ ಪ್ರಶಸ್ತಿ
Authored by:
Bhagya R K