DRDOದ Aerial Delivery Research and Development Establishment (ADRDE) ತಂಡವು ವಿಶ್ವದ ಅತ್ಯಂತ ಎತ್ತರದ ಡ್ರಾಪ್ ಝೋನ್‌ಗಳಲ್ಲಿ ಒಂದಾದ ಲಡಾಖ್‌ನ ನ್ಯೋಮಾ-ಮುಧ್‌ನಲ್ಲಿ -15°C ತಾಪಮಾನದ ತೀವ್ರ ಚಳಿಯ ವಾತಾವರಣದಲ್ಲಿ, ಸಮುದ್ರ ಮಟ್ಟದಿಂದ 22,000 ಅಡಿ ಎತ್ತರದಿಂದ ಹಾರಿ 20,000 ಅಡಿಯಲ್ಲಿ ಪ್ಯಾರಾಚೂಟ್ ಬಿಡುಗಡೆ ಮಾಡಿ 13,700 ಅಡಿ ಎತ್ತರದ ನಿಗದಿತ ಸ್ಥಳದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗುವ ಮೂಲಕ MCPS ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತು.

ಪ್ರಮುಖ ಪರೀಕ್ಷಕರ ತಂಡ: DRDOದ ಪ್ರಮುಖ ಸಂಸ್ಥೆಯಾದ ಆಗ್ರಾದ ADRDE (Aerial Delivery Research and Development Establishment) ತಂಡದ ಸದಸ್ಯರು ಈ ಜಂಪ್ ನಡೆಸಿದರು:

  1. ವಿಂಗ್ ಕಮಾಂಡರ್ ರಾಹುಲ್ ಝಾ (ಮುಖ್ಯ ಟೆಸ್ಟ್ ಜಂಪರ್)
  2. ಮಾಸ್ಟರ್ ವಾರಂಟ್ ಆಫೀಸರ್ R.J. ಸಿಂಗ್
  3. ಮಾಸ್ಟರ್ ವಾರಂಟ್ ಆಫೀಸರ್ ವಿವೇಕ್ ತಿವಾರಿ 

ಮಿಲಿಟರಿ ಕಾಂಬ್ಯಾಟ್ ಪ್ಯಾರಾಚೂಟ್ ಸಿಸ್ಟಮ್ (MCPS) ವಿಶೇಷತೆಗಳು:

  • ಬೆಂಗಳೂರು ಹಾಗೂ ಆಗ್ರಾ ಸಂಸ್ಥೆಗಳ ಜಂಟಿ ಕೊಡುಗೆ: ಈ ವ್ಯವಸ್ಥೆಯನ್ನು DRDOದ ಆಗ್ರಾದ ADRDE ಮತ್ತು ಬೆಂಗಳೂರಿನ DEBEL (Defence Bioengineering and Electromedical Laboratory) ಜಂಟಿಯಾಗಿ ಅಭಿವೃದ್ಧಿಪಡಿಸಿವೆ.
  • NavIC ತಂತ್ರಜ್ಞಾನದ ಬೆಂಬಲ: ಭಾರತದ ಸ್ವದೇಶಿ ಸ್ಯಾಟಲೈಟ್ ನ್ಯಾವಿಗೇಷನ್ ವ್ಯವಸ್ಥೆಯಾದ NavIC (Navigation with Indian Constellation) ನೊಂದಿಗೆ ಇದು ಕಾರ್ಯನಿರ್ವಹಿಸುತ್ತದೆ. ಇದರಿಂದ ವಿದೇಶಿ GPS ಮೇಲಿನ ಅವಲಂಬನೆ ಕಡಿಮೆಯಾಗಲಿದ್ದು, ಯುದ್ಧದ ಸಮಯದಲ್ಲಿ ಶತ್ರುಗಳ ನ್ಯಾವಿಗೇಷನ್ ಅಡಚಣೆಯನ್ನು (Interference) ತಡೆಯಬಹುದು.
  • ಸುಧಾರಿತ ಸಾಧನಗಳು: ಸೈನಿಕರ ಸುರಕ್ಷತೆಗಾಗಿ ಸ್ವದೇಶಿ ಪ್ಯಾರಾ ಕಂಪ್ಯೂಟರ್, ವಿಶೇಷ ಆಮ್ಲಜನಕ ಪೂರೈಕೆ ವ್ಯವಸ್ಥೆ (Oxygen System) ಮತ್ತು ತೀವ್ರ ಚಳಿಯನ್ನು ತಡೆಯುವ 'ಸ್ಪೆಷಲ್ ಜಂಪ್‌ಸೂಟ್'ಗಳನ್ನು ಅಳವಡಿಸಲಾಗಿದೆ