* ದಿನೇಶ್ ಕಾರ್ತಿಕ್ ಟಿ20ಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ವಿಕೆಟ್ ಕೀಪರ್ ಬ್ಯಾಟರ್ ಆಗಿ ಇತಿಹಾಸ ನಿರ್ಮಿಸಿದ್ದಾರೆ. ಈ ಸಾಧನೆಯೊಂದಿಗೆ ಅವರು ಭಾರತದ ದಿಗ್ಗಜ ಮಾಜಿ ನಾಯಕ, ವಿಕೆಟ್ ಕೀಪರ್ ಎಂ.ಎಸ್. ಧೋನಿ ಅವರ ದಾಖಲೆಯನ್ನು ಮುರಿದಿದ್ದಾರೆ.
* ದಿನೇಶ್ ಕಾರ್ತಿಕ್ ಐಪಿಎಲ್ 2024 ನಂತರ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದರು, ಆದರೆ ಮರಳಿ ಕಮ್‌ಬ್ಯಾಕ್ ಮಾಡಿದರು. ರಾಜಸ್ಥಾನ್ ರಾಯಲ್ಸ್ ಮಾಲಿಕತ್ವದ ಪಾರ್ಲ್ ರಾಯಲ್ಸ್ ಅವರನ್ನು ಖರೀದಿಸಿದ್ದು, ಅವರು ದಕ್ಷಿಣ ಆಫ್ರಿಕಾ 20 ಲೀಗ್‌ನಲ್ಲಿ ಆಡುತ್ತಿದ್ದಾರೆ.
* ದಿನೇಶ್ ಕಾರ್ತಿಕ್ ರಾಜಸ್ಥಾನ್ ರಾಯಲ್ಸ್ ತಂಡದ ವಿಕೆಟ್ ಕೀಪರ್ ಆಗಿದ್ದು, ಈ ಮೂಲಕ ದಿನೇಶ್ ಕಾರ್ತಿಕ್ ಐಪಿಎಲ್ ನಂತರ ಮಾನ್ಯತೆ ಪಡೆದ ಫ್ರಾಂಚೈಸಿ ಟಿ20 ಲೀಗ್‌ನ ಭಾಗವಾದ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ.
* ಇತ್ತೀಚೆಗೆ ನಡೆದ ಡರ್ಬನ್ ಸೂಪರ್‌ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ 15 ಎಸೆತಗಳಲ್ಲಿ 21 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಇನ್ನಿಂಗ್ಸ್ ಮೂಲಕ ದಿನೇಶ್ ಕಾರ್ತಿಕ್ ಧೋನಿ ದಾಖಲೆಯನ್ನು ಮುರಿದಿದ್ದಾರೆ.
* ಇಲ್ಲಿಯವರೆಗೆ ದಿನೇಶ್ ಕಾರ್ತಿಕ್ 409 ಟಿ20 ಪಂದ್ಯಗಳಲ್ಲಿ 7451 ರನ್ ಗಳಿಸಿದ್ದಾರೆ. ಧೋನಿ 391 ಟಿ20 ಪಂದ್ಯಗಳಲ್ಲಿ 7432 ರನ್ ಗಳಿಸಿದ್ದಾರೆ.
* ದಕ್ಷಿಣ ಆಫ್ರಿಕಾ 20 ಲೀಗ್‌ಗೂ ಮುನ್ನ ಈ ದಾಖಲೆ ಮುರಿಯಲು ದಿನೇಶ್ ಕಾರ್ತಿಕ್‌ಗೆ 26 ರನ್‌ಗಳ ಅಗತ್ಯವಿತ್ತು. ಅವರು ಕಳೆದ 8 ಪಂದ್ಯಗಳಲ್ಲಿ ಕೇವಲ ಐದು ಬಾರಿ ಮಾತ್ರ ಬ್ಯಾಟ್ ಮಾಡಲು ಅವಕಾಶ ಸಿಕ್ಕಿತ್ತು. ಆದರೆ ಕಳೆದ 4 ಇನ್ನಿಂಗ್ಸ್‌ಗಳಲ್ಲಿ 19 ರನ್ ಮಾತ್ರ ಸಿಡಿಸಿದ್ದರು. ಬಹುತೇಕ ಪಂದ್ಯಗಳಲ್ಲಿ ಗೆಲುವಿನ10-20 ರನ್​ ಇದ್ದಾಗ ಬ್ಯಾಟಿಂಗ್​ ಬಂದಿದ್ದರು.
* ಈ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ (15 ಎಸೆತಗಳಲ್ಲಿ 21) ಪ್ರಮುಖ ಇನಿಂಗ್ಸ್ ಆಡಿದರು. ಇನ್ನು ಭಾರತದ ಪರ ಟಿ20 ಕ್ರಿಕೆಟ್​ನಲ್ಲಿ ಹೆಚ್ಚು ರನ್​ಗಳಿಸಿದ ಭಾರತೀಯ ಕ್ರಿಕೆಟಿಗರಲ್ಲಿ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರು 399 ಪಂದ್ಯಗಳಲ್ಲಿ 12,886 ರನ್​ಗಳಿಸಿದ್ದಾರೆ. ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ 448 ಪಂದ್ಯಗಳಲ್ಲಿ 11,830 ರನ್​ಳಿಸಿ 2ನೇ ಸ್ಥಾನದಲ್ಲಿ, ಭಾರತದ ಮಾಜಿ ಕ್ರಿಕೆಟಿಗ ಶಿಖರ್ ಧವನ್ 344 ಪಂದ್ಯಗಳಲ್ಲಿ 9,797ರನ್​, ಸುರೇಶ್ ರೈನಾ 336 ಪಂದ್ಯಗಳಲ್ಲಿ 8654 ರನ್​, ಸೂರ್ಯಕುಮಾರ್ ಯಾದವ್​ 306 ಪಂದ್ಯಗಳಲ್ಲಿ 7887 ರನ್​ ಹಾಗೂ ಕೆಎಲ್ ರಾಹುಲ್ 226 ಪಂದ್ಯಗಳಲ್ಲಿ 7586 ರನ್​ಗಳಿಸಿ ಕಾರ್ತಿಕ್​ಗಿಂತ ಮುಂದಿದ್ದಾರೆ.