* ಭಾರತೀಯ ವಾಯುಪಡೆಯು ಮೊದಲ ಬಾರಿಗೆ ಸಮಗ್ರ ವಾಯು ಪ್ರದೇಶ ರಕ್ಷಣಾ ವ್ಯವಸ್ಥೆ (IADWS) ಪರೀಕ್ಷೆಯನ್ನು ಒಡಿಶಾದ ಚಾಂದಿಪುರದಲ್ಲಿ ಯಶಸ್ವಿಯಾಗಿ ನೆರವೇರಿಸಿದೆ.
* ಈ ಪ್ರಯೋಗವು ವಾಯುಪ್ರದೇಶ ರಕ್ಷಣೆಯಲ್ಲಿ ಭಾರತದ ಸಾಮರ್ಥ್ಯವನ್ನು ತೋರಿಸಿದ್ದು, ಪ್ರಾದೇಶಿಕ ಭದ್ರತೆ ಸವಾಲುಗಳನ್ನು ಎದುರಿಸಲು ಸೇನೆಯ ಶಕ್ತಿವರ್ಧನೆ ಅಗತ್ಯವಿದೆ ಎಂಬುದನ್ನು ಒತ್ತಿಹೇಳಿದೆ.
* ಈ ಪರೀಕ್ಷೆ ‘ಆಪರೇಷನ್ ಸಿಂಧೂರ’ ನಡೆದ ಮೂರು ತಿಂಗಳ ನಂತರ ನಡೆದಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಡಿಆರ್‌ಡಿಒ, ಸಶಸ್ತ್ರ ಪಡೆಗಳು ಹಾಗೂ ಕೈಜೋಡಿಸಿದ ಉದ್ಯಮಗಳನ್ನು ಅಭಿನಂದಿಸಿದ್ದಾರೆ.
* ಐಎಡಬ್ಲುಎಸ್ ಬಹು ಹಂತದ ರಕ್ಷಣಾ ವ್ಯವಸ್ಥೆಯಾಗಿದ್ದು, ದೇಶೀಯ ಕ್ಷಿಪಣಿಗಳನ್ನು ಒಳಗೊಂಡಿದೆ. ಇದರಲ್ಲಿ ನೆಲದಿಂದ ಆಗಸಕ್ಕೆ ಗುರಿ ಹೊಡೆಯುವ ಕ್ಯೂಆರ್‌ಎಸ್‌ಎಎಂ ಕ್ಷಿಪಣಿ, ಕಡಿಮೆ ವ್ಯಾಪ್ತಿಯ ಗುರಿ ನಾಶ ಮಾಡುವ ‘ವಿಶಾರ್ಡ್ಸ್’ ವ್ಯವಸ್ಥೆ ಮತ್ತು ಲೇಸರ್ ಆಧಾರಿತ ಅಧಿಕ ಶಕ್ತಿ ಶಸ್ತ್ರಾಸ್ತ್ರಗಳು (DEW) ಸೇರಿವೆ.
* ಈ ಎಲ್ಲಾ ಶಸ್ತ್ರಾಸ್ತ್ರಗಳನ್ನು ಕೇಂದ್ರೀಕೃತ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರದಿಂದ ನಿಯಂತ್ರಿಸಲಾಗುತ್ತದೆ. ಕಮಾಂಡ್ ವ್ಯವಸ್ಥೆಯನ್ನು ಡಿಆರ್‌ಡಿಒ ಅಭಿವೃದ್ಧಿಪಡಿಸಿದ್ದು, ‘ವಿಶಾರ್ಡ್ಸ್’ ಅನ್ನು ರಿಸರ್ಚ್ ಸೆಂಟರ್ ಇಮಾರತ್ ಮತ್ತು ಡಿಇಡಬ್ಲುಗಳನ್ನು ಸೆಂಟರ್ ಫಾರ್ ಹೈ ಎನರ್ಜಿ ಸಿಸ್ಟಮ್ಸ್ ಅಂಡ್ ಸೈನ್ಸಸ್ ಅಭಿವೃದ್ಧಿಪಡಿಸಿದೆ.
ದೇಸಿ ನಿರ್ಮಿತ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆ ಪರೀಕ್ಷೆ ಯಶಸ್ವಿ
Published by Jyoti Angadi
25 ಆಗಸ್ಟ್ 2025