* 2025 ರ ಒಳಗೆ ಭಾರತದ 5000 ವರ್ಷಗಳ ಇತಿಹಾಸವನ್ನು ತಿಳಿಸುವ ವಿಶ್ವದ ಅತಿ ದೊಡ್ಡ ವಸ್ತು ಸಂಗ್ರಯಲವನ್ನು ನಿರ್ಮಿಸಲಾಗುವುದು. ಈ ವಿಷಯದ ಬಗ್ಗೆ ಭಾರತ ಹಾಗೂ ಫ್ರಾನ್ಸ್ ನಡುವೆ ಒಪ್ಪಂದ ಏರ್ಪಟ್ಟಿದೆ ಎಂದು ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಜೂನ್ 30 ರಂದು ತಿಳಿಸಿದ್ದಾರೆ.
* ಫ್ರಾನ್ಸ್ ನ ಲೂವರ್ ವಸ್ತು ಸಂಗ್ರಾಲಯವು ಜಗತ್ತಿನ ಅತಿದೊಡ್ಡ ವಸ್ತು ಸಂಗ್ರಾಲಯವಾಗಿದೆ. ಇದಕ್ಕೂ ಎರಡು ಪಟ್ಟು ವಿಸ್ತಾರವಾದ ವಸ್ತು ಸಂಗ್ರಾಲಯವನ್ನು ಭಾರತ ನಿರ್ಮಿಸಲಾಗುವುದು ಎಂದು ತಿಳಿಸಿದರು.
* ದೆಹಲಿಯಲ್ಲಿ ನಿರ್ಮಿಸಲಾಗುವ ಯುಗೇ ಯುಗೀನ್ ಭಾರತ್ ರಾಷ್ಟ್ರೀಯ ವಸ್ತು ಸಂಗ್ರಹಾಲಯವು ವಿಶ್ವದ ಅತಿದೊಡ್ಡ ವಸ್ತು ಸಂಗ್ರಹಾಲಯವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
* 5,000 ವರ್ಷಗಳ ಹಿಂದಿನ ಭಾರತದ ಕಥೆಯನ್ನು ಹೇಳುವ ಎಂಟು ವಿಷಯಾಧಾರಿತ ವಿಭಾಗಗಳನ್ನು ಈ ವಸ್ತು ಸಂಗ್ರಹಾಲಯ ಹೊಂದಿರುತ್ತದೆ ಎಂದು ಹೇಳಿದ್ದಾರೆ.
* ಇದು 1.17 ಲಕ್ಷ ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿದ್ದು, ನೆಲಮಾಳಿಗೆಯಲ್ಲಿ 950 ಕೊಠಡಿಗಳು ಇರಲಿವೆ. ಇದು ಮೂರು ಮಹಡಿಗಳನ್ನು ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೋಮವಾರ, 01 ಜುಲೈ 2024
4:58 ಅಪರಾಹ್ನ
Daily PDF
ದೇಶದಲ್ಲಿ ವಿಶ್ವದ ಅತಿದೊಡ್ಡ ವಸ್ತು ಸಂಗ್ರಾಲಯ ನಿರ್ಮಾಣ
Authored by:
Bhagya R K