* ಭಾರತದಲ್ಲಿ ಚಿರತೆಗಳ ಸಂಖ್ಯೆಯಲ್ಲಿ ಏರಿಕೆ ಕಂಡಿದ್ದು, 2018ರಲ್ಲಿ 12,852 ಇದ್ದ ಈ ವನ್ಯಮೃಗಗಳ ಸಂಖ್ಯೆ 2022ರಲ್ಲಿ 13,874ಕ್ಕೆ ಹೆಚ್ಚಳವಾಗಿದೆ.
* ಕರ್ನಾಟಕದಲ್ಲಿ ಸಹ ಚಿರತೆಗಳ ಸಂಖ್ಯೆ ಹೆಚ್ಚಳವಾಗಿದೆ. 2018ರಲ್ಲಿ ಕರ್ನಾಟಕದಲ್ಲಿ 1,783 ಚಿರತೆಗಳು ಇದ್ದವು. 2022ರಲ್ಲಿ ಇವುಗಳ ಸಂಖ್ಯೆ 1,879 ಕ್ಕೆ ಏರಿಕೆಯಾಗಿದೆ, 2018 ರಿಂದ 2022ರ 4 ವರ್ಷದ ಅವಧಿಯಲ್ಲಿ ದೇಶಾದ್ಯಂತ 1022 ಚಿರತೆಗಳು ಹೆಚ್ಚಳವಾಗಿವೆ, ಎಂದು ಕೇಂದ್ರ ಪರಿಸರ ಸಚಿವಾಲಯ ಗುರುವಾರ ತಿಳಿಸಿದೆ.
* ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಈ ವರದಿಯನ್ನು ಬಿಡುಗಡೆ ಮಾಡಿದ್ದಾರೆ.
* ಮಧ್ಯಪ್ರದೇಶದಲ್ಲಿ ಗರಿಷ್ಠ ಸಂಖ್ಯೆಯ 3,907 ಚಿರತೆಗಳಿವೆ. 2018ರಲ್ಲಿ ಇವುಗಳ ಸಂಖ್ಯೆ 3,421 ಇತ್ತು ಎಂದು ವರದಿಯಲ್ಲಿ ವಿವರಿಸಲಾಗಿದೆ. ಮಹಾರಾಷ್ಟ್ರದಲ್ಲಿ 2018ರಲ್ಲಿ 1,690ರಷ್ಟಿದ್ದ ಚಿರತೆಗಳ ಸಂಖ್ಯೆ 2022ರ ವೇಳೆಗೆ 1,985ಕ್ಕೆ ಏರಿಕೆಯಾಗಿತ್ತು. ಇದೇ ಅವಧಿಯಲ್ಲಿ ತಮಿಳುನಾಡಿನಲ್ಲಿ ಇವುಗಳ ಸಂಖ್ಯೆ 868ರಿಂದ 1,070ಕ್ಕೆ ಏರಿಕೆಯಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
* ಮಧ್ಯಪ್ರದೇಶದಲ್ಲಿ 3907 ಚಿರತೆಗಳಿದ್ದು ಮೊದಲ ಸ್ಥಾನದಲ್ಲಿದೆ. ಮಹಾರಾಷ್ಟ್ರದಲ್ಲಿ 1985 ಚಿರತೆಗಳಿದ್ದು ಎರಡನೇ ಸ್ಥಾನದಲ್ಲಿ, ಹಾಗೂ ಕರ್ನಾಟಕದಲ್ಲಿ 1,879 ಚಿರತೆಗಳಿದ್ದು 3ನೇ ಸ್ಥಾನದಲ್ಲಿದ್ದರೆ, ತಮಿಳುನಾಡಿನಲ್ಲಿ 1070 ಚಿರತೆಗಳಿದ್ದು ನಾಲ್ಕನೇ ಸ್ಥಾನದಲ್ಲಿದೆ.
* ಚಿರತೆಗಳ ಸಂಖ್ಯೆ ಹೆಚ್ಚಳ ಜೀವ ವೈವಿಧ್ಯತೆಗೆ ದೇಶದ ಅಚಲವಾದ ಸಮರ್ಪಣೆಗೆ ಸಾಕ್ಷಿಯಾಗಿದೆ. ಸುಸ್ಥಿರ ಸಹಬಾಳ್ವೆಗೆ ಜಾಗ ಮಾಡಿ ಕೊಡುವ ವನ್ಯಜೀವಿ ಸಂರಕ್ಷಣೆಯ ವಿವಿಧ ಸಾಮೂಹಿಕ ಪ್ರಯತ್ನಗಳ ಭಾಗವಾದ ಎಲ್ಲರನ್ನೂ ಅಭಿನಂದಿಸುತ್ತೇನೆ ಎಂದು ಪ್ರಧಾನಿ ಮೋದಿ ಅವರು ತಿಳಿಸಿದ್ದಾರೆ.
ದೇಶದಲ್ಲಿ ಚಿರತೆಗಳ ಸಂಖ್ಯೆ ಹೆಚ್ಚಳ : ಕರ್ನಾಟಕಕ್ಕೆ 3ನೇ ಸ್ಥಾನ
Published by Basavaraj Halli
01 ಮಾರ್ಚ್ 2024