* ಭಾರತೀಯ ಸರ್ಕಾರವು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳನ್ನು ವಿಲೀನಗೊಳಿಸಲು ಯೋಜಿಸಿದೆ. ದೇಶದಲ್ಲಿರುವ 43 ಗ್ರಾಮೀಣ ಬ್ಯಾಂಕುಗಳನ್ನು 28 ಬ್ಯಾಂಕುಗಳಿಗೆ ವಿಲೀನಗೊಳಿಸಲು ಮುಂದಾಗಿದೆ.
* 'ಒಂದು ರಾಜ್ಯ ಒಂದು ಗ್ರಾಮೀಣ ಬ್ಯಾಂಕ್' ಎಂಬ ಆಲೋಚನೆಯಲ್ಲಿ ಸರ್ಕಾರವು ವಿಲೀನಕ್ಕೆ ಮುಂದಾಗಿದೆ. ಈ ನಿಟ್ಟಿನಲ್ಲಿ ನಬಾರ್ಡ್ ಜೊತೆಗೆ ಸರ್ಕಾರ ಸಮಾಲೋಚನೆ ನಡೆಸುತ್ತಿದೆ.
* ರಾಯಿಟರ್ಸ್ ಪರಿಶೀಲಿಸಿದ ನವೆಂಬರ್ 4 ರ ಸರ್ಕಾರಿ ದಾಖಲೆಯ ಪ್ರಕಾರ ಇದು ಈ ಸಾಲದಾತರು ವೆಚ್ಚವನ್ನು ಕಡಿತಗೊಳಿಸಲು ಮತ್ತು ಅವರ ಬಂಡವಾಳದ ಮೂಲವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
* 2004-05ರಲ್ಲಿ ಮೊದಲ ಬಾರಿಗೆ ಗ್ರಾಮೀಣ ಬ್ಯಾಂಕುಗಳ ವಿಲೀನ ಪ್ರಕ್ರಿಯೆಯನ್ನು ಸರ್ಕಾರ ಆರಂಭಿಸಿತು. ಈವರೆಗೆ ಮೂರು ಹಂತಗಳಲ್ಲಿ ಈ ಕೆಲಸ ನಡೆದಿದೆ. 196 ಇದ್ದ ಗ್ರಾಮೀಣ ಬ್ಯಾಂಕುಗಳ ಸಂಖ್ಯೆ 43ಕ್ಕೆ ಇಳಿದಿದೆ. ಈಗ ನಾಲ್ಕನೇ ಸುತ್ತಿನ ಪ್ರಕ್ರಿಯೆ ಸದ್ಯದಲ್ಲೇ ಆರಂಭವಾಗಬಹುದು.
* ಗ್ರಾಮೀಣ ಬ್ಯಾಂಕುಗಳ ವಿಲೀನದಿಂದ ಆಗುವ ಪ್ರಯೋಜನ :-
- ಬ್ಯಾಂಕುಗಳ ವೆಚ್ಚ ಕಡಿಮೆ ಆಗಬಹುದು.
- ತಂತ್ರಜ್ಞಾನದ ಸಮರ್ಪಕ ಬಳಕೆ ಸಾಧ್ಯ
- ಬ್ಯಾಂಕ್ ಕಾರ್ಯಾಚರಣೆ ನಿರ್ವಹಣೆ ಹೆಚ್ಚು ಸುಲಭ
- ಜನರನ್ನು ತಲುಪುವುದು ಹೆಚ್ಚು ಸುಲಭ
* ದೇಶದಲ್ಲಿರುವ ಪ್ರತಿಯೊಂದು ಗ್ರಾಮೀಣ ಬ್ಯಾಂಕುಗಳಲ್ಲಿ ನಿಯಮ ರೀತಿಯಲ್ಲಿ ಪಾಲುದಾರಿಕೆ ಇರುತ್ತದೆ. ಕೇಂದ್ರ ಸರ್ಕಾರ ಶೇ. 50ರಷ್ಟು ಪಾಲು ಹೊಂದಿರುತ್ತದೆ. ರಾಜ್ಯ ಸರ್ಕಾರದ ಪಾಲು ಶೇ. 15 ಮಾತ್ರವೇ ಇರುತ್ತದೆ. ಹಾಗೆಯೇ ಪ್ರತಿಯೊಂದು ಗ್ರಾಮೀಣ ಬ್ಯಾಂಕಿಗೂ ಪ್ರಾಯೋಜಿತ ನ್ಯಾಷನಲ್ ಬ್ಯಾಂಕ್ ಇರುತ್ತದೆ. ಈ ಸ್ಪಾನ್ಸರ್ ಬ್ಯಾಂಕ್ನ ಪಾಲು ಶೇ. 35ರಷ್ಟು ಇರುತ್ತದೆ.
* ದೇಶದ ಎಲ್ಲಾ ರಾಜ್ಯಗಳಲ್ಲೂ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿವೆ. 12 ರಾಜ್ಯಗಳಲ್ಲಿ ಒಂದಕ್ಕಿಂತ ಹೆಚ್ಚು ರೂರಲ್ ಬ್ಯಾಂಕ್ಗಳಿವೆ. ಇಂಥವನ್ನು ಒಂದು ಬ್ಯಾಂಕ್ಗೆ ವಿಲೀನಗೊಳಿಸಲಾಗುತ್ತದೆ.
* ಕರ್ನಾಟಕದಲ್ಲಿ ಮೂರು ಗ್ರಾಮೀಣ ಬ್ಯಾಂಕುಗಳಿವೆ. ಬಳ್ಳಾರಿಯಲ್ಲಿ ಕೆನರಾ ಬ್ಯಾಂಕ್ ಪ್ರಾಯೋಜಕತ್ವದಲ್ಲಿ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್, ಮೈಸೂರಿನಲ್ಲಿ ಎಸ್ಬಿಐ ಪ್ರಾಯೋಜಕತ್ವದಲ್ಲಿ ಕಾವೇರಿ ಗ್ರಾಮೀಣ ಬ್ಯಾಂಕ್, ಧಾರವಾಡದಲ್ಲಿ ಕರ್ನಾಟಕ ವಿಕಾಸ್ ಗ್ರಾಮೀಣ ಬ್ಯಾಂಕ್ ಇದೆ. ಇದರ ಪ್ರಾಯೋಜಕ ಬ್ಯಾಂಕ್ ಸಿಂಡಿಕೆಟ್ ಬ್ಯಾಂಕ್ ಈ ಮೂರು ಬ್ಯಾಂಕನ್ನು ವಿಲೀನಗೊಳಿಸಿ, ಅದರ ಪ್ರಾಯೋಜಕತ್ವವನ್ನು ಎಸ್ಬಿಐ, ಕೆನರಾ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕ್ ಈ ಮೂರರಲ್ಲಿ ಒಂದಕ್ಕೆ ನೀಡಲಾಗುತ್ತದೆ.
* ಆಂಧ್ರದಲ್ಲಿ ನಾಲ್ಕು ಗ್ರಾಮೀಣ ಬ್ಯಾಂಕ್ ಇದ್ದು ಅವನ್ನು ವಿಲೀನಗೊಳಿಸಿ ಸಿಂಡಿಕೇಟ್ ಬ್ಯಾಂಕ್ ಅಡಿಗೆ ತರಬೇಕು ಎನ್ನುವ ಯೋಚನೆ ಇದೆ. ಪಶ್ಚಿಮ ಬಂಗಾಳದಲ್ಲಿರುವ ಮೂರು ಗ್ರಾಮೀಣ ಬ್ಯಾಂಕುಗಳನ್ನು ವಿಲೀನಗೊಳಿಸಿ ಪಿಎನ್ಬಿ ಅಡಿಗೆ ತರಬಹುದು.
ದೇಶದ ವಿವಿಧೆಡೆ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ವಿಲೀನಕ್ಕೆ ಸರ್ಕಾರ ಸಜ್ಜು
Published by Jyoti Angadi
06 ನವೆಂಬರ್ 2024