* ದೇಶದ ಮೊದಲ ಎರಡು ಅತ್ಯಾಧುನಿಕ 3 ನ್ಯಾನೋಮೀಟರ್ ಚಿಪ್ ವಿನ್ಯಾಸ ಕೇಂದ್ರಗಳನ್ನು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಉದ್ಘಾಟಿಸಿದರು.
* ಬೆಂಗಳೂರು ಮತ್ತು ನೊಯ್ದಾದಲ್ಲಿ ಸ್ಥಾಪಿಸಲಾದ ಈ ಚಿಪ್ ವಿನ್ಯಾಸ ಕೇಂದ್ರಗಳಿಗೆ ಚಾಲನೆ ನೀಡಿದ ಸಚಿವರು ''ಭಾರತವನ್ನು ಸೆಮಿಕಂಡಕ್ಟರ್ ನಾವೀನ್ಯತೆಯಲ್ಲಿ ಮುಂಚೂಣಿಗೆ ತರಲು ಇದು ಮಹತ್ತರ ಹೆಜ್ಜೆ'' ಎಂದು ಹೇಳಿದರು.
* ರೆನೆಸಾಸ್ ಎಲೆಕ್ಟ್ರಾನಿಕ್ಸ್ ಇಂಡಿಯಾ ಲಿಮಿಟೆಡ್ ಅಭಿವೃದ್ಧಿಪಡಿಸಿದ ಈ ಕೇಂದ್ರಗಳು, ದೇಶದ ಸೆಮಿಕಂಡಕ್ಟರ್ ಉದ್ಯಮದ ಬೆಳವಣಿಗೆಗೆ ಹೊಸ ವೇಗ ನೀಡಲಿವೆ.
* ಇಂಜಿನಿಯರಿಂಗ್ ವಿದ್ಯಾರ್ಥಿಗಳಲ್ಲಿ ಪ್ರಾಯೋಗಿಕ ಹಾರ್ಡ್‌ವೇರ್ ನೈಪುಣ್ಯವನ್ನು ಬೆಳೆಸಲು ಉದ್ದೇಶಿಸಿದ ಹೊಸ ಸೆಮಿಕಂಡಕ್ಟರ್ ಕಲಿಕಾ ಕಿಟ್ ಬಿಡುಗಡೆ ಮಾಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
* ''ಭಾರತವು ನಮ್ಮ ಸಂಸ್ಥೆಯ ಕಾರ್ಯತಂತ್ರದ ಪ್ರಮುಖ ಭಾಗವಾಗಿದೆ. ಎಂಬೆಡೆಡ್ ಸಿಸ್ಟಮ್, ಸಾಫ್ಟ್‌ವೇರ್ ಮತ್ತು ಸಿಸ್ಟಮ್ ನಾವೀನ್ಯತೆಯಲ್ಲಿ ಪೈವೇಟ್ ಭಾರತದಲ್ಲಿ ತನ್ನ ಪಾತ್ರವನ್ನು ವಿಸ್ತರಿಸುತ್ತಿದೆ'' ಎಂದು ರೆನೆಸಾಸ್ ವಿನ್ಯಾಸ ಎಲೆಕ್ಟ್ರಾನಿಕ್ಸ್‌ನ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕ ಹಿಡೆಟೋಶಿ ಶಿಬಾಟಾ ಹೇಳಿದರು.
ಗುರುವಾರ, 15 ಮೇ 2025
12:19 ಅಪರಾಹ್ನ
Daily PDF
ದೇಶದ ಮೊದಲ 3 ನ್ಯಾನೋಮೀಟರ್ ಚಿಪ್ ವಿನ್ಯಾಸ ಕೇಂದ್ರಗಳಿಗೆ ಚಾಲನೆ
Authored by:
Jyoti Angadi