* ಪ್ರತಿ ವರ್ಷ ಡಿಸೆಂಬರ್ 21 ರಂದು ಜೇಮ್ಸ್ ನೈಸ್ಮಿತ್ ಮ್ಯಾನಚೂನೆಟ್ಸ್ನ ಸ್ಪಿಂಗ್‌ಫೀಲ್ಡ್‌ನಲ್ಲಿ ಆಟವನ್ನು ಪರಿಚಯಿಸಿದ ದಿನವನ್ನು ವಿಶ್ವ ಬಾಸ್ಕೆಟ್‌ಬಾಲ್ ದಿನವನ್ನಾಗಿ ಆಚರಿಸಲಾಗುತ್ತದೆ.
* ಜೇಮ್ಸ್ ನೈಸ್ಮಿತ್ ಅವರು ಡಿಸೆಂಬರ್ 21 1891 ರಂದು ಅಮೆರಿಕದ ಮ್ಯಾಸಚೂಸೆಟ್ಸ್‌ನ ಸ್ಪ್ರಿಂಗ್‌ಫೀಲ್ಡ್‌ನಲ್ಲಿರುವ ಇಂಟರ್‌ನ್ಯಾಶನಲ್ ವೈಎಂಸಿಎ ಟ್ರೈನಿಂಗ್ ಸ್ಕೂಲ್‌ನಲ್ಲಿ ಈ ಬಾಸ್ಕೆಟ್‌ಬಾಲ್ ಆಟವನ್ನು ಪರಿಚಯಿಸಿದರು.
* 2023 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಡಿಸೆಂಬರ್ 21 ಅನ್ನು "ವಿಶ್ವ ಬಾಸ್ಕೆಟ್‌ಬಾಲ್ ದಿನ" ಎಂದು ಘೋಷಿಸುವ ನಿರ್ಣಯವನ್ನು ಅಂಗೀಕರಿಸಿತು.
* ವಿಶ್ವ ಬಾಸ್ಕೆಟ್‌ಬಾಲ್ ದಿನ ಈ ಪರಿಕಲ್ಪನೆಯನ್ನು NYU ಪ್ರೊಪೆಸರ್ ಡೇವಿಡ್ ಹೊಲಾಂಡರ್ ಅವರು ತಮ್ಮ ಇತ್ತೀಚಿನ ಪುಸ್ತಕ' ಹೌ ಬಾಸ್ಕೆಟ್‌ಬಾಲ್ ಕ್ಯಾನ್ ಸೇವ್ ದಿ ವರ್ಲ್ಡ್' ನಲ್ಲಿ ಹುಟ್ಟುಹಾಕಿದ್ದಾರೆ.
* ಬಾಸ್ಕೆಟ್‌ಬಾಲ್ ಇಷ್ಟಪಡುವ ಮತ್ತು ವ್ಯಾಪಕವಾಗಿ ಅಭ್ಯಾಸ ಮಾಡುವ ಕ್ರೀಡೆಗಳಲ್ಲಿ ಒಂದಾಗಿದೆ. FIBAದ ಅಂದಾಜು ಮಾಡಿರುವ ಪ್ರಕಾರ, ಪ್ರಸ್ತುತ ವಿಶ್ವಾದ್ಯಂತ ಕನಿಷ್ಠ 450 ಮಿಲಿಯನ್ ಬ್ಯಾಸ್ಕೆಟ್‌ಬಾಲ್ ಆಟಗಾರರಿದ್ದಾರೆ.
* ಕೆನಡಾದ ದೈಹಿಕ ಶಿಕ್ಷಣ ಬೋಧಕರಾದ ಡಾ. ಜೇಮ್ಸ್ ನೈಸ್ಮಿತ್ ಅವರು ವಿದ್ಯಾರ್ಥಿಗಳನ್ನು ಸಕ್ರಿಯವಾಗಿರಿಸಲು ಆಟವನ್ನು ಅಭಿವೃದ್ಧಿಪಡಿಸಿದ ನಂತರ, ಮ್ಯಾಸಚೂಸೆಟ್ಸ್‌ನ ಸ್ಪ್ರಿಂಗ್‌ಫೀಲ್ಡ್‌ನಲ್ಲಿರುವ ಇಂಟರ್ನ್ಯಾಷನಲ್ YMCA ತರಬೇತಿ ಶಾಲೆಯಲ್ಲಿ 1891 ರಲ್ಲಿ ಬ್ಯಾಸ್ಕೆಟ್‌ಬಾಲ್ ಅನ್ನು ಮೊದಲ ಬಾರಿಗೆ ಆಡಲಾಯಿತು.
ಶನಿವಾರ, 21 ಡಿಸೆಂಬರ್ 2024
10:44 ಪೂರ್ವಾಹ್ನ
Daily PDF
ಡಿಸೆಂಬರ್ 21 : ವಿಶ್ವ ಬಾಸ್ಕೆಟ್‌ಬಾಲ್ ದಿನ
Authored by:
Jyoti Angadi