* ಪ್ರತಿ ವರ್ಷ ಡಿಸೆಂಬರ್ 20ರಂದು ವಿವಿಧತೆಯಲ್ಲಿ ಏಕತೆ ಗೌರವಿಸಲು ಅಂತಾರಾಷ್ಟ್ರೀಯ ಮಾನವ ಐಕ್ಯತಾ ದಿನವನ್ನು ಆಚರಿಸಲಾಗುತ್ತದೆ.
* ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಪ್ರತಿ ವರ್ಷ ಡಿಸೆಂಬರ್ 20 ಅನ್ನು ಅಂತಾರಾಷ್ಟ್ರೀಯ ಮಾನವ ಐಕ್ಯತಾ ದಿನವೆಂದು ಘೋಷಿಸಿತು. ಡಿಸೆಂಬರ್ 22, 2005 ರಂದು ಈ ನಿರ್ಣಯವನ್ನು ಅಂಗೀಕರಿಸಿತು, ವಿಶ್ವ ಸಾಲಿಡಾರಿಟಿ ಫಂಡ್ ಅನ್ನು ಜನರಲ್ ಅಸೆಂಬ್ಲಿಯು ಡಿಸೆಂಬರ್ 20, 2002 ರಂದು ಸ್ಥಾಪಿಸಲಾಯಿತು.
* ವಿವಿಧತೆಯಲ್ಲಿ ಏಕತೆಯನ್ನು ಆಚರಿಸುವ ದಿನಇದಾಗಿದ್ದು , ಅಂತಾರಾಷ್ಟ್ರೀಯ ಒಪ್ಪಂದಗಳಿಗೆ ತಮ್ಮ ಬದ್ಧತೆಗಳನ್ನು ಗೌರವಿಸಲು ಸರಕಾರಗಳನ್ನು ನೆನಪಿಸುವ ದಿನ. ಒಗ್ಗಟ್ಟಿನ ಮಹತ್ವದ ಬಗ್ಗೆ ಸಾರ್ವಜನಿಕ ಅರಿವು ಮೂಡಿಸುವ ದಿವಸ.
* ಬಡತನ ನಿರ್ಮೂಲನೆ ಸೇರಿದಂತೆ ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆಗಾಗಿ ಒಗ್ಗಟ್ಟನ್ನು ಉತ್ತೇಜಿಸುವ ಮಾರ್ಗಗಳ ಕುರಿತು ಚರ್ಚೆಯನ್ನು ಉತ್ತೇಜಿಸುವ ದಿನವಾಗಿದೆ. ಬಡತನ ನಿರ್ಮೂಲನೆಗಾಗಿ ಹೊಸ ಉಪಕ್ರಮಗಳನ್ನು ಉತ್ತೇಜಿಸುವ ದಿನವಾಗಿದೆ.
* 2005 ರಲ್ಲಿ ಆರಂಭವಾದ ಈ ದಿನಾಚರಣೆಯು ಮಾನವರ ಒಗ್ಗಟ್ಟು ಎಂಬ ಶಕ್ತಿಯ ಮೂಲಕ ಭೂ ಸುಧಾರಣೆ, ಆರೋಗ್ಯ ಸೌಲಭ್ಯಗಳು, ಪ್ರಕೃತಿ ವಿಕೋಪಗಳಲ್ಲಿ ನಲುಗಿದವರಿಗೆ ಸಹಾಯ ಹಸ್ತ ಚಾಚುವುದು, ಸಾರ್ವತ್ರಿಕ ಶಿಕ್ಷಣವನ್ನು ಪ್ರೋತ್ಸಾಹಿಸುವುದು, ಬಡತ, ಭ್ರಷ್ಟಾಚಾರ ಮತ್ತು ಭಯೋತ್ಪಾದನೆಯ ವಿರುದ್ಧ ಹೋರಾಡುವ ಉದ್ದೇಶಗಳನ್ನು ಹೊಂದಿವೆ.
ಡಿಸೆಂಬರ್ 20 ಅಂತಾರಾಷ್ಟ್ರೀಯ ಮಾನವ ಐಕ್ಯತಾ ದಿನ
Published by Siddaram Halli
20 ಡಿಸೆಂಬರ್ 2024