* ಜಗತ್ತಿನಾದ್ಯಂತ ಇರುವ ವಲಸಿಗರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯ ಕುರಿತು ಗಮನ ಸೆಳೆಯುವುದು ಮತ್ತು ವಲಸಿಗರ ಹಕ್ಕುಗಳನ್ನು ರಕ್ಷಿಸುವ ಸಲುವಾಗಿ ಪ್ರತಿ ವರ್ಷ ಡಿಸೆಂಬರ್ 18 ರಂದು ಅಂತಾರಾಷ್ಟ್ರೀಯ ವಲಸಿಗರ ದಿನವನ್ನು ಆಚರಿಸಲಾಗುತ್ತದೆ.
* ವಿಶ್ವಸಂಸ್ಥೆ ದಿ ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ (ಯುಎನ್ ಜಿಎ) ಡಿಸೆಂಬರ್ 18 ರಂದು ಅಂತಾರಾಷ್ಟ್ರೀಯ ವಲಸಿಗರ ದಿನವನ್ನು ಆಚರಿಸಲು ಡಿಸೆಂಬರ್ 4, 2000 ರಂದು ನಿರ್ಧರಿಸಿತ್ತು.
* ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ 2024 ರ ಅಂತರರಾಷ್ಟ್ರೀಯ ವಲಸಿಗರ ದಿನದ ಥೀಮ್ 'ವಲಸಿಗರ ಕೊಡುಗೆಗಳನ್ನು ಗೌರವಿಸುವುದು ಮತ್ತು ಅವರ ಹಕ್ಕುಗಳನ್ನು ಗೌರವಿಸುವುದು'.
* ಪ್ರಪಂಚದಾದ್ಯಂತ ಅಗಾಧವಾದ ಮತ್ತು ಹೆಚ್ಚುತ್ತಿರುವ ವಲಸಿಗರನ್ನು ಪರಿಗಣಿಸಿದ ನಂತರ ಈ ವಿಶೇಷ ದಿನವು ಅಸ್ತಿತ್ವಕ್ಕೆ ಬಂದಿದೆ.
* 1990 ಡಿಸೆಂಬರ್ 4 ರಂದು ವಲಸೆ ಕಾರ್ಮಿಕರು ಮತ್ತು ಅವರ ಕುಟುಂಬಗಳ ಸದಸ್ಯರ ಹಕ್ಕುಗಳ ರಕ್ಷಣೆಗಾಗಿ ಅಂತರರಾಷ್ಟ್ರೀಯ ಸಮಾವೇಶವನ್ನು ನಡೆಸಿತ್ತು. ಬಳಿಕ ಡಿಸೆಂಬರ್ 18 2000 ರಿಂದ ಪ್ರತಿ ವರ್ಷ ಈ ಅಂತರಾಷ್ಟ್ರಿಯ ವಲಸಿಗರ ದಿನವನ್ನು ಆಚರಿಸುತ್ತ ಬರಲಾಗಿದೆ.
* ವಲಸೆಗೆ ಕಾರಣಗಳು : ಯುದ್ಧ, ಪ್ರಾಕೃತಿಕ ವಿಕೋಪಗಳು, ಬಡತನ, ಆರ್ಥಿಕ ತೊಂದರೆಗಳು, ಕ್ರೌರ್ಯ ಮತ್ತಿತರ ಹಲವಾರು ಕಷ್ಟ ಕಾರಣಗಳಿಂದ ಜನರು ವಲಸೆ ಹೋಗುತ್ತಾರೆ.
* ನಿರಾಶ್ರಿತರು, ವಲಸೆ ಕಾರ್ಮಿಕರು ಹಾಗೂ ಆಂತರಿಕವಾಗಿ ಸ್ಥಳಾಂತರಗೊಂಡ ವ್ಯಕ್ತಿಗಳಿಗೆ ವಲಸೆಯ ಕುರಿತು ಸೇವೆಗಳು ಮತ್ತು ಸಲಹೆಗಳನ್ನು ಒದಗಿಸುವ ಏಜನ್ಸಿ ಯ ಹೆಸರು - International Organisation for Migration ( IOM ),ಈ ಏಜೆನ್ಸಿಯು 2016ರಲ್ಲಿ ವಿಶ್ವ ಸಂಸ್ಥೆಯ ಏಜೆನ್ಸಿ ಆಯಿತು.
* ಯುರೋಪ್ ಮತ್ತು ಏಷ್ಯಾ ಖಂಡಗಳಿಂದ ವಲಸೆ ಹೋಗುವವರ ಪ್ರಮಾಣ ಹೆಚ್ಚಾಗಿದ್ದು, 8.7 ಕೋಟಿ ಮತ್ತು 8.6 ಕೋಟಿ ಜನರು ಇಲ್ಲಿಂದಲೇ ವಲಸೆ ಹೋಗುತ್ತಿದ್ದಾರೆ. ವಿಶ್ವದಾದಂತ್ಯ ಶೇ 61ರಷ್ಟು ಜನರು ಯುರೋಪ್ ಮತ್ತು ಏಷ್ಯಾ ಖಂಡಗಳಿಗೆ ಸೇರಿದವರಾಗಿದ್ದಾರೆ.
* 460 ಕೋಟಿ ಜನಸಂಖ್ಯೆ ಇರುವ ಏಷ್ಯಾದಲ್ಲಿ ಶೇ 40ರಷ್ಟು ಮಂದಿ ಅಂತಾರಾಷ್ಟ್ರೀಯ ವಲಸಿಗರಾಗಿದ್ದು, ಇದರಲ್ಲಿ ಆರು ದೇಶಗಳ ಜನರು ಶೇ 20ರಷ್ಟು ನೆಲೆಸಿದ್ದಾರೆ. ಈ ಪೈಕಿ ಭಾರತ ಕೂಡ ಅಗ್ರಸ್ಥಾನದಲ್ಲಿದ್ದು , ಭಾರತದಿಂದ ವಲಸೆ ಹೋಗುವವರು ಜಗತ್ತಿನಲ್ಲಿಯೇ ಅತಿ ಹೆಚ್ಚು ಎನ್ನಲಾಗಿದೆ.
* ಭಾರತಕ್ಕೆ ಹೊರದೇಶಗಳಿಂದ 48.78 ಲಕ್ಷ ವಲಸಿಗರು ಬಂದಿದ್ದು, ಈ ವಲಸಿಗರಿಂದ ಭಾರತಕ್ಕೆ ಅತಿ ಹೆಚ್ಚು ಹಣ ಹರಿದುಬರುತ್ತಿದೆ ಎಂದು ಅಂಕಿಅಂಶದಿಂದ ತಿಳಿದು ಬಂದಿದೆ.
* ಇದರ ಪ್ರಧಾನ ಕಚೇರಿ ಸ್ವಿಜರ್ಲ್ಯಾಂಡ್ ನ, ಗೆನೇವಾ ಎಂಬ ನಗರದಲ್ಲಿದೆ.
- 2007ರಲ್ಲಿ ನಡೆಸಿದ ಸಮೀಕ್ಷಯ ಪ್ರಕಾರ 1.2 ಅಕ್ರಮ ವಲಸಿಗರಿದ್ದರು.
- 2014ರಲ್ಲಿ ನಡೆಸಿದ ಸಮೀಕ್ಷಯ ಪ್ರಕಾರ 1.11 ಅಕ್ರಮ ವಲಸಿಗರಿದ್ದರು.
ಬುಧವಾರ, 18 ಡಿಸೆಂಬರ್ 2024
10:48 ಪೂರ್ವಾಹ್ನ
Daily PDF
ಡಿಸೆಂಬರ್ 18 : ಅಂತಾರಾಷ್ಟ್ರೀಯ ವಲಸಿಗರ ದಿನ
Authored by:
Bhagya R K