* ವಿಶ್ವ ಆರೋಗ್ಯ ಸಂಘಟನೆ (WTO) ಬಿಡುಗಡೆ ಮಾಡಿರುವ 'ಗ್ಲೋಬಲ್ ಟ್ರೇಡ್ ಔಟ್ ಲುಕ್' ಅಂಕಿ ಅಂಶಗಳ ಪ್ರಕಾರ ಭಾರತವು ಡಿಜಿಟಲ್ ವಿತರಣಾ ಸೇವೆಗಳ ನಾಲ್ಕನೇ ಅತಿ ದೊಡ್ಡ ರಾಫ್ತುದಾರನಾಗಿ ಹೊರಹೊಮ್ಮಿದೆ.
* 2023ರಲ್ಲಿ ಭಾರತದ ಡಿಜಿಟಲ್ ವಿತರಣಾ ಸೇವೆಗಳ ರಫ್ತು 257 ಬಿಲಿಯಲ್ ಡಾಲರ್ ಎಂದು ಅಂದಾಜಿಸಲಾಗಿದೆ. ಇದು 2022ಕ್ಕಿಂತ ಶೇ.17ರಷ್ಟು ಹೆಚ್ಚುಳವಾಗಿದೆ ಎಂದು ವರದಿ ತಿಳಿಸಿದೆ. ಈ ಬೆಳವಣಿಗೆ ಮೂಲಕ ಭಾರತವು ಜರ್ಮನಿಯನ್ನು ಹಿಂದಿಕ್ಕಿದೆ. ಆದರೆ ಅಮೆರಿಕ, ಇಂಗ್ಲೆಂಡ್ ಹಾಗೂ ಐರ್ಲೆಂಡ್ ಗಿಂತ ಹಿಂದುಳಿದಿದೆ.
* ಕಳೆದ ಎರಡು ದಶಕಗಳಲ್ಲಿ ಶಿಕ್ಷಣ, ಗೇಮಿಂಗ್, ಸ್ಟೀಮಿಂಗ್ ಮ್ಯೂಸಿಕ್ ಹಾಗೂ ವಿಡಿಯೊಗಳಲ್ಲಿ ವೃತ್ತಿಪರ ಸೇವೆ ಒದಗಿಸುವ ಡಿಜಿಟಲ್ ವಿತರಣಾ ಸೇವೆಯು ಗಮನಾರ್ಹ ಏರಿಕೆ ಕಂಡಿವೆ. ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ನೆಲಕಚ್ಚಿದ್ದ ಡಿಜಿಟಲ್ ವಿತರಣಾ ಸೇವೆಯು ಇತ್ತೀಚಿನ ದಿನಗಳಲ್ಲಿ ಚೇತರಿಕೆಯ ಹಾದಿ ಹಿಡಿದಿದೆ. ಪಠ್ಯ, ಚಿತ್ರಗಳು, ಸಂಗೀತ ಹಾಗೂ ವಿಡಿಯೊಗಳಿಗೆ ಸಂಬಂಧಿಸಿದ ವಿಷಯ ರಚಿಸಲು ಎಐ ಬಳಸಲಾಗುತ್ತಿದೆ. ಇದು ಡಿಜಿಟಲ್ ವಿತರಣಾ ಸೇವೆಯನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು WTO ತಿಳಿಸಿದೆ.
ಡಿಜಿಟಲ್ ವಿತರಣಾ ಸೇವೆಯಲ್ಲಿ ಭಾರತಕ್ಕೆ 4ನೇ ಸ್ಥಾನ
Published by Akshata Halli
13 ಏಪ್ರಿಲ್ 2024