* ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ (ನಿಮ್ಯಾನ್) ಮಾಜಿ ನಿರ್ದೇಶಕ, ಡಾ.ಬಿ.ಎನ್.ಗಂಗಾಧರ ಅವರನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗದ (ಎನ್‌ಎಂಸಿ) ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
* ಈ ಮೊದಲು ಎನ್ ಎಂಸಿಲ್ಲಿ ವೈದ್ಯಕೀಯ ಮೌಲ್ಯಮಾಪನ ಮತ್ತು ರೇಟಿಂಗ್ ಬೋರ್ಡ್ ಅಧ್ಯಕ್ಷರಾಗಿದ್ದರು. ಇತ್ತೀಚೆಗೆ ನಿವೃತ್ತರಾದ ಸುರೇಶ್ ಶರ್ಮಾ ಅವರ ಹುದ್ದೆಗೆ ಡಾ. ಬಿ.ಎನ್. ಗಂಗಾಧರ್ ಅವರನ್ನು ನೇಮಕ ಮಾಡಲಾಗಿದೆ.
* ಮುಂದಿನ ನಾಲ್ಕು ವರ್ಷ ಅಥವಾ 70 ವರ್ಷ ವಯಸ್ಸಿನವರೆಗೆ ಅಥವಾ ಮುಂದಿನ ಆದೇಶದವರೆಗೆ ಅಧಿಕಾರದಲ್ಲಿರುತ್ತಾರೆ.
* ಗಂಗಾಧರ್ ಅವರು ಸೆಪ್ಟೆಂಬರ್ 25 ರಂದು ಎನ್‌ಎಂಸಿಯ ಕಾರ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
* ಗಂಗಾಧರ್ ಅವರು ಮನೋವೈದ್ಯಶಾಸ್ತ್ರದ ಹಿರಿಯ ಪ್ರಾಧ್ಯಾಪಕರಾಗಿ ಮತ್ತು ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು.
* ಗಂಗಾಧರ್ ಅವರು ಬೆಂಗಳೂರು ವೈದ್ಯಕೀಯ ಕಾಲೇಜಿನಿಂದ ಎಂಬಿಬಿಎಸ್ ಮತ್ತು ನಿಮ್ಹಾನ್ಸ್‌ನಿಂದ ಎಂಡಿ ಸೈಕಿಯಾಟ್ರಿ ಮತ್ತು ಸ್ವ್ಯಾಸ ವಿಶ್ವವಿದ್ಯಾಲಯದಿಂದ ಡಾಕ್ಟರ್ ಆಫ್ ಸೈನ್ಸ್ ಅನ್ನು ಅಧ್ಯಯನ ಮಾಡಿದರು.
ಗುರುವಾರ, 04 ಜುಲೈ 2024
12:34 ಅಪರಾಹ್ನ
Daily PDF
ಡಾ.ಬಿ.ಎನ್. ಗಂಗಾಧರ್ ಎನ್‌ಎಂಸಿ ಅಧ್ಯಕ್ಷರಾಗಿ ನೇಮಕ
Authored by:
Bhagya R K