* ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನ (ಎಚ್‌ಎಎಲ್) ವಿಮಾನ ವಿಭಾಗದ ಕನ್ನಡ ಸಂಘವು ನೀಡುವ ‘ಕನ್ನಡ ಕಾಯಕಶ್ರೀ’ ಪ್ರಶಸ್ತಿಗೆ ಕವಿ ಬಿ.ಆರ್. ಲಕ್ಷ್ಮಣರಾವ್ ಅವರನ್ನು ಆಯ್ಕೆ ಮಾಡಲಾಗಿದೆ.
* ಲಕ್ಷ್ಮಣರಾವ್ ಅವರು ಸಾಹಿತ್ಯ ಕ್ಷೇತ್ರದಲ್ಲಿ ನೀಡಿರುವ ಕೊಡುಗೆಗಾಗಿ ಈ ಗೌರವ ಲಭಿಸಿದೆ. ಪ್ರಶಸ್ತಿಯು ₹20 ಸಾವಿರ ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ಒಳಗೊಂಡಿದೆ.
* ಪ್ರಶಸ್ತಿ ಪ್ರದಾನ ಸಮಾರಂಭ ಜೂನ್ 22ರಂದು ಎಚ್‌ಎಎಲ್ ಬಳಿ ಇರುವ ವಿ.ಎಂ. ಘಾಟ್ಗೆ ಸಭಾಂಗಣದಲ್ಲಿ ನಡೆಯಲಿದೆ.
* ಕಾರ್ಯಕ್ರಮವನ್ನು ಹೃದಯರೋಗ ತಜ್ಞೆ ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ ಉದ್ಘಾಟಿಸಲಿದ್ದು, ಎಚ್‌ಎಎಲ್ ವಿಮಾನ ವಿಭಾಗದ ಮಹಾ ವ್ಯವಸ್ಥಾಪಕ ವಿ. ಶ್ರೀಕೃಷ್ಣ ಪ್ರಸಾದ್ ಅಧ್ಯಕ್ಷತೆ ವಹಿಸಲಿದ್ದಾರೆ.
ಬುಧವಾರ, 11 ಜೂನ್ 2025
10:50 ಪೂರ್ವಾಹ್ನ
Daily PDF
ಡಾ. ಬಿ.ಆರ್. ಲಕ್ಷ್ಮಣರಾವ್ರಿಗೆ ಕನ್ನಡ 'ಕಾಯಕಶ್ರೀ' ಪ್ರಶಸ್ತಿ
Authored by:
Jyoti Angadi