ವಿಶ್ವಸಂಸ್ಥೆಯ ವಿಶ್ವ ವನ್ಯಜೀವಿ ಅಪರಾಧ ವರದಿ: ಹುಲಿ ದೇಹದ ಭಾಗಗಳ ಅತಿದೊಡ್ಡ ಪೂರೈಕೆದಾರರಲ್ಲಿ ಭಾರತ
Published by Basavaraj Halli
28 ಜುಲೈ 2020
ವಿಶ್ವ ಸಂಸ್ಥೆಯ ಡ್ರಗ್ಸ್ ಅಂಡ್ ಕ್ರೈಮ್ ಆಫೀಸ್ ಇತ್ತೀಚೆಗೆ ವಿಶ್ವ ವನ್ಯಜೀವಿ ಅಪರಾಧ ವರದಿಯನ್ನು ಬಿಡುಗಡೆ ಮಾಡಿತು. ಈ ವರದಿಯು ಸಂರಕ್ಷಿತ ಜೀವಿಗಳ ಕಳ್ಳಸಾಗಣೆಯ ವಿವರಗಳನ್ನು ಒಳಗೊಂಡಿದೆ. ಹಾಗೂ ಈ ವರದಿಯ ಪ್ರಕಾರ ಹುಲಿ ಭಾಗಗಳ ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ವಶಪಡಿಸಿಕೊಂಡ ಸಾಗಣೆಗೆ ಥೈಲ್ಯಾಂಡ್ ಮತ್ತು ಭಾರತ ಮುಖ್ಯ ಮೂಲ ದೇಶಗಳಾಗಿವೆ ಎಂಬುದು ತಿಳಿದುಬಂದಿದೆ.
ಹುಲಿ ದೇಹದ ಭಾಗಗಳು ಉತ್ತಮ ಔಷಧೀಯ ಮೌಲ್ಯಗಳನ್ನು ಹೊಂದಿವೆ. ಹುಲಿಯ ಮೂಳೆಗಳಿಂದ ಮಾಡಿದ ಔಷಧಿಗಳನ್ನು ಅಸ್ಥಿರಜ್ಜು ಗಾಯಗಳು, ಕೀಲು ಮತ್ತು ಮೂಳೆ ಮುರಿತಗಳನ್ನು ಗುಣಪಡಿಸಲು ಬಳಸಲಾಗುತ್ತದೆ.