ರಿಲಯನ್ಸ್ ಜಿಯೋ - BP ಒಪ್ಪಂದ: ದೇಶದಲ್ಲಿ 4,100 ಪೆಟ್ರೋಲ್ ಪಂಪ್ ತೆರೆಯಲು ಯೋಜನೆ
Published by Basavaraj Halli
19 ಜುಲೈ 2020
ನವದೆಹಲಿ: ರಿಲಯನ್ಸ್ ಸಂಸ್ಥೆಯು BP (The British Petroleum Company plc) ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಇಂಧನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ದೊಡ್ಡ ಬದಲಾವಣೆ ತರಲು ರಿಲಯನ್ಸ್ 4,100 ಪೆಟ್ರೋಲ್ ಪಂಪ್ಗಳನ್ನು ತೆರೆಯುವದಾಗಿ ಘೋಷಿಸಿದೆ.
ಈ ಬಗ್ಗೆ ಜಿಯೋ, ಬಿಪಿ ಪಿಎಲ್ಸಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಹೊಸ ಇಂಧನ ಮತ್ತು ಚಲನಶೀಲ ಜಂಟಿ ಉದ್ಯಮಕ್ಕೆ "ರಿಲಯನ್ಸ್ ಬಿಪಿ ಮೊಬಿಲಿಟಿ ಲಿಮಿಟೆಡ್" (ಆರ್ಬಿಎಂಎಲ್) ಎಂದು ಹೆಸರಿಸಲಾಗುವುದು.
ಈ ನೂತನ ಒಪ್ಪಂದದಿಂದಾಗಿ ಸುಮಾರು 60 ಸಾವಿರ ಉದ್ಯೋಗಿಗಳ ಸಂಖ್ಯೆಯೂ ಹೆಚ್ಚಾಗುವ ನಿರೀಕ್ಷೆಯಿದೆ.
ವರದಿಯ ಪ್ರಕಾರ, ಜುಲೈ ಆರಂಭದಲ್ಲಿ ಎರಡೂ ಕಂಪನಿಗಳು ಜಿಯೋ ಬಿಪಿ ಬ್ರಾಂಡ್ ಹೆಸರಿನಲ್ಲಿ ವ್ಯವಹಾರವನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದವು.
ಪ್ರಸ್ತುತ, ರಿಲಯನ್ಸ್ ದೇಶದಲ್ಲಿ 1,400 ಪೆಟ್ರೋಲ್ ಪಂಪ್ಗಳನ್ನು ಹೊಂದಿದೆ. ಮುಂದಿನ ಐದು ವರ್ಷಗಳಲ್ಲಿ ಪೆಟ್ರೋಲ್ ಪಂಪ್ಗಳ ಸಂಖ್ಯೆಯನ್ನು 5,500 ಕ್ಕೆ ಹೆಚ್ಚಿಸುವ ಗುರಿಯನ್ನು ಹೊಂದಿದ್ದು, ಇದಕ್ಕಾಗಿ 4,100 ಹೊಸ ಪಂಪ್ಗಳನ್ನು ತೆರೆಯುವ ಯೋಜನೆ ಹೊಂದಿದೆ.