ಮುಕೇಶ್ ಅಂಬಾನಿ ಈಗ ವಿಶ್ವದ 6ನೇ ಶ್ರೀಮಂತ ವ್ಯಕ್ತಿ
Published by Basavaraj Halli
15 ಜುಲೈ 2020
ಭಾರತದ ಅತ್ಯಂತ ಸಿರಿವಂತ ಉದ್ಯಮಿ ಎನಿಸಿರುವ ರಿಲಯನ್ಸ್ ಇಂಡಸ್ಟ್ರೀಸ್ನ ಮಾಲೀಕ ಮುಕೇಶ್ ಅಂಬಾನಿ ಅವರು ಈಗ ವಿಶ್ವದ 6ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ.
ಅತಿ ಹೆಚ್ಚು ವೈಯಕ್ತಿಕ ಸಂಪತ್ತು ಹೊಂದುವ ವಿಷಯದಲ್ಲಿ ಕಳೆದ ವಾರವಷ್ಟೇ ವಾರನ್ ಬಫೆಟ್ ಅವರನ್ನು ಹಿಂದಿಕ್ಕಿದ್ದ ಮುಕೇಶ್ ಅಂಬಾನಿಯವರ ಸಂಪತ್ತು ಈಗ ಬ್ಲೂಮ್ಬರ್ಗ್ ಕೋಟ್ಯಧಿಪತಿಗಳ ಸೂಚ್ಯಂಕದ ಪ್ರಕಾರ ಅವರ ಆಸ್ತಿಯ ಮೌಲ್ಯ 72.4 ಬಿಲಿಯನ್ ಡಾಲರ್ (₹5.43 ಲಕ್ಷ ಕೋಟಿ)ಗೆ ತಲುಪಿದೆ.
ಅಂಬಾನಿಯವರ ರಿಲಯನ್ಸ್ ಉದ್ಯಮ ಸಮೂಹದ ಶೇರುಗಳ ಮೌಲ್ಯದಲ್ಲಿ ಮಾರ್ಚ್ ಆನಂತರ ಎರಡು ಪಟ್ಟು ಏರಿಕೆಯಾಗಿದ್ದು, ಫೇಸ್ಬುಕ್ ಹಾಗೂ ಸಿಲ್ವರ್ಲೇಕ್ ಸೇರಿದಂತೆ ಹಲವಾರು ಕಂಪೆನಿಗಳು ರಿಲಯನ್ಸ್ ಡಿಜಿಟಲ್ ಉದ್ಯಮದಲ್ಲಿ 15 ಶತಕೋಟಿ ಡಾಲರ್ ಗೂ ಹೆಚ್ಚು ಹೂಡಿಕೆಯನ್ನು ಮಾಡಿರುವ ಹಿನ್ನಲೆ ಮುಕೇಶ್ ಅಂಬಾನಿ ಸಂಪತ್ತು ಏರಿಕೆ ಕಂಡಿದೆ.