ಲಂಡನ್‌: ತಮ್ಮ ಅಪೂರ್ವ ಆಟದ ಮೂಲಕ ಫುಟ್‌ಬಾಲ್‌ ಲೋಕದಲ್ಲಿ ವಿಶಿಷ್ಟ ಛಾಯೆ ಮೂಡಿಸಿದ್ದ ಇಂಗ್ಲೆಂಡ್‌ನ ಹಿರಿಯ ಆಟಗಾರ ಜಾಕ್‌ ಚಾರ್ಲ್‌ಟನ್‌ ತಮ್ಮ 85 ವಯಸ್ಸಿನಲ್ಲಿ ನಿಧನರಾದರು. * ಇವರು 1966ರ ವಿಶ್ವಕಪ್‌ನಲ್ಲಿ ಪ್ರಶಸ್ತಿ ಜಯಿಸಿದ್ದ ಇಂಗ್ಲೆಂಡ್‌ ತಂಡದಲ್ಲಿ ಆಡಿದ್ದರು. * 1965ರಿಂದ 1970ರ ಅವಧಿಯಲ್ಲಿ ಇಂಗ್ಲೆಂಡ್ ಪರ 35 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಇವರು 06 ಗೋಲುಗಳನ್ನು ದಾಖಲಿಸಿದ್ದರು. * 1952ರಿಂದ 1973ರವರೆಗೂ ಲೀಡ್ಸ್‌ ಯುನೈಟೆಡ್‌ ಕ್ಲಬ್‌ ಪ್ರತಿನಿಧಿಸಿದ್ದ ಇವರು ಒಟ್ಟು 629 ಪಂದ್ಯಗಳಲ್ಲಿ 70 ಗೋಲುಗಳನ್ನು ದಾಖಲಿಸಿದ್ದಾರೆ.