ರಷ್ಯಾದಿಂದ 33 ಫೈಟರ್ ವಿಮಾನ ಖರೀದಿಗೆ ಕೇಂದ್ರ ಸರ್ಕಾರದಿಂದ ಗ್ರೀನ್ ಸಿಗ್ನಲ್
Published by Basavaraj Halli
03 ಜುಲೈ 2020
ಭಾರತ - ಚೀನಾ ಗಡಿಯಲ್ಲಿ ಪ್ರಸ್ತುತ ತಲೆದೋರಿರುವ ವಿವಾದದ ಈ ಸಂದರ್ಭದಲ್ಲಿ ಕೇಂದ್ರ ರಕ್ಷಣಾ ಸಚಿವಾಲಯವು ಮತ್ತಷ್ಟು ಶಸ್ತ್ರಾಸ್ತ್ರ ಖರೀದಿ ಮೂಲಕ ಭಾರತೀಯ ಸೇನೆಯ ಬಲವನ್ನು ಹೆಚ್ಚಿಸಲು ಮುಂದಾಗಿದೆ.
* ರಷ್ಯಾದಿಂದ 33 ಹೊಸ ಫೈಟರ್ ಜೆಟ್ ವಿಮಾನಗಳು, 12 Su-30MKIs and 21 MiG-29 ಜೊತೆಗೆ ಪ್ರಸ್ತುತ ಸೇನೆ ಬಳಿ ಇರುವ MiG-29 ವಿಮಾನಗಳ ಉನ್ನತೀಕರಣಕ್ಕೆ ಸಮ್ಮತಿ ಸೂಚಿಸಲಾಗಿದೆ.
* ಈ ಒಪ್ಪಂದದ ಒಟ್ಟು ಮೌಲ್ಯ 18,148 ಕೋಟಿ ರೂಪಾಯಿಗಳಾಗಿದ್ದು, ಭಾರತ ಸೇನೆ ಈ ಒಪ್ಪಂದದಿಂದಾಗಿ ಬರುವ ದಿನಗಳಲ್ಲಿ ಮತ್ತಷ್ಟು ಬಲಿಷ್ಟವಾಗಲಿದೆ.