‘At One Click’ ಕೈಗಾರಿಕೆಗಳಿಗಾಗಿ ಗುಜರಾತ್ ಸರ್ಕಾರದಿಂದ ನೂತನ ಯೋಜನೆ
Published by Basavaraj Halli
28 ಜೂನ್ 2020
ಗುಜರಾತ್ ರಾಜ್ಯದ 12,247 ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಮತ್ತು ದೊಡ್ಡ ಕೈಗಾರಿಕಾ ಘಟಕಗಳಿಗೆ (ಜವಳಿ ಉದ್ಯಮ ಸೇರಿದಂತೆ), ಗುಜರಾತ್ ಸರ್ಕಾರವು ಆನ್ಲೈನ್ ನಲ್ಲಿ ಹಣದ ನೆರವು ನೀಡಲು ಜೂನ್ 26 2020ರಂದು ‘ಅಟ್ ಒನ್ ಕ್ಲಿಕ್’ ಎಂಬ ನೂತನ ಯೋಜನೆಯನ್ನು ಆರಂಭಿಸಿದೆ. ಗುಜರಾತ್ ರಾಜ್ಯದ ಈಗಿನ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಈ ನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಯೋಜನೆ ಬಗ್ಗೆ : ‘ಅಟ್ ಒನ್ ಕ್ಲಿಕ್’ ಎನ್ನುವುದು ಆನ್ಲೈನ್ ನೆರವು ನೀಡುವ ಯೋಜನೆಯಾಗಿದ್ದು, ಇದಕ್ಕಾಗಿ ಗುಜರಾತ್ ಸರ್ಕಾರ MSME ಗಳು ಮತ್ತು ದೊಡ್ಡ ಕೈಗಾರಿಕಾ ಘಟಕಗಳಿಗೆ (ಜವಳಿ ಉದ್ಯಮ ಸೇರಿದಂತೆ) 1,369 ಕೋಟಿ ರೂ. ಗಳಷ್ಟು ಆರ್ಥಿಕ ನೆರವು ನೀಡುವದಾಗಿದೆ.